Select Your Language

Notifications

webdunia
webdunia
webdunia
webdunia

ರೋಹಿತ್ ಶರ್ಮಾ ಬಗೆಗೆ ಭವಿಷ್ಯ ನುಡಿದ ಟೀಂ ಇಂಡಿಯಾ ಮಾಜಿ ನಾಯಕ

ರೋಹಿತ್ ಶರ್ಮಾ ಬಗೆಗೆ ಭವಿಷ್ಯ ನುಡಿದ ಟೀಂ ಇಂಡಿಯಾ ಮಾಜಿ ನಾಯಕ
Mumbai , ಶನಿವಾರ, 20 ಮೇ 2017 (07:31 IST)
ಮುಂಬೈ: ಚಾಂಪಿಯನ್ಸ್ ಟ್ರೋಫಿಗೆ ಆಡುವಾಗ ರೋಹಿತ್ ಶರ್ಮಾ ಫಿಟ್ ಆಗಿ ಬಂದರು ಎಂದು ಖುಷಿಪಡುತ್ತಿದ್ದ ಅಭಿಮಾನಿಗಳಿಗೆ ಟೀಂ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ನಿರಾಸೆ ಮೂಡಿಸಿದ್ದಾರೆ.

 
ರೋಹಿತ್ ಐಪಿಎಲ್ ನಲ್ಲಿ ಉತ್ತಮ ಆಟವಾಡಲಿಲ್ಲ. ಅವರು ಚಾಂಪಿಯನ್ಸ್ ಟ್ರೋಫಿಗೆ ಆರಂಭಿಕರಾಗಿ ಕಣಕ್ಕಿಳಿಯಲು ಹೇಗೆ ಸಾಧ್ಯ ಎನ್ನುವುದು ಅಜರುದ್ದೀನ್ ಪ್ರಶ್ನೆ.

‘ಆರಂಭಿಕ ಆಟಗಾರ ಮೊದಲ 10 ಓವರ್ ಅಥವಾ 20 ಓವರ್ ಆಡಬೇಕು. ಹಾಗಿದ್ದರೆ ಮಾತ್ರ ಆತನಿಂದ ತಂಡಕ್ಕೆ ಉಪಯೋಗ. ಆದರೆ ರೋಹಿತ್ ಐಪಿಎಲ್ ನಲ್ಲಿ ಆರಂಭಿಕರಾಗಿ ಆಡಲೇ ಇಲ್ಲ. ಬದಲಿಗೆ ಮೂರು ಅಥವಾ ನಾಲ್ಕನೇ ಕ್ರಮಾಂಕದಲ್ಲಿ ಆಡಿ ಸೋತರು. ಅವರು ಇದರಿಂದ ಸಾಧಿಸಿದ್ದಾದರೂ ಏನು?

ಹೀಗೇ ಆದರೆ ಅವರು ಚಾಂಪಿಯನ್ಸ್ ಟ್ರೋಫಿಯಲ್ಲಿ ಸೋಲುವುದು ನಿಶ್ಚಿತ.  ಇಂಗ್ಲೆಂಡ್ ನ ಪರಿಸ್ಥಿತಿಯೂ ವಿಭಿನ್ನ. ಅವರು ಈಗಷ್ಟೇ ಗಾಯದಿಂದ ಚೇತರಿಸಿಕೊಂಡಿದ್ದಾರೆ. ಹಾಗಾಗಿ ಅವರಿಗೆ ಅಲ್ಲಿ ಯಶಸ್ಸು ಸಿಗುವುದು ಕಷ್ಟ’ ಎಂದು ಅಜರುದ್ದೀನ್ ಭವಿಷ್ಯ ನುಡಿದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಹೋಟೆಲ್ ನ ಬೇರರ್ ಇದೀಗ ಐಪಿಎಲ್ ಆಟಗಾರ!