ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ಇಶಾಂತ್ ಶರ್ಮಾ ಇಟೆಲಿಯಲ್ಲಿ ಸುತ್ತಾಡುತ್ತಿದ್ದಾರೆ. ಒಬ್ಬರೇ ಅಲ್ಲ, ಪತ್ನಿ ಪ್ರತಿಮಾ ಸಿಂಗ್ ಜತೆ ಹನಿಮೂನ್ ಗೆಂದು ಇಟೆಲಿಗೆ ಹೋಗಿದ್ದಾರೆ.
ಡಿಸೆಂಬರ್ 9 ರಂದು ಇಂಗ್ಲೆಂಡ್ ಟೆಸ್ಟ್ ಸರಣಿಯ ಮಧ್ಯದಲ್ಲೇ ಇವರ ವಿವಾಹ ನವದೆಹಲಿಯಲ್ಲಿ ನೆರವೇರಿತ್ತು. ಇದೀಗ ಟೀಂ ಇಂಡಿಯಾ ಕ್ರಿಕೆಟ್ ನಿಂದ ಬಿಡುವು ದೊರಕಿದ್ದು, ಬಿಡುವಿನ ವೇಳೆಯಲ್ಲಿ ಹನಿಮೂನ್ ಮುಗಿಸುತ್ತಿದ್ದಾರೆ.
ವಿವಾಹವಾದ ಎರಡೇ ದಿನಕ್ಕೆ ಇಶಾಂತ್ ಚೆನ್ನೈ ಟೆಸ್ಟ್ ಗಾಗಿ ತಂಡವನ್ನು ಕೂಡಿಕೊಂಡಿದ್ದರು. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಇಟೆಲಿಯ ಸುಂದರ ತಾಣಗಳಲ್ಲಿ ಪತ್ನಿಯ ಜತೆ ತೆಗೆಸಿಕೊಂಡು ರೊಮ್ಯಾಂಟಿಕ್ ಫೋಟೋಗಳನ್ನು ಇಶಾಂತ್ ಪ್ರಕಟಿಸಿದ್ದಾರೆ. ಸದ್ಯಕ್ಕೆ ಹನಿಮೂನ್ ಮೂಡ್ ನಲ್ಲಿರುವ ಇಶಾಂತ್ ಗೆ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯಕ್ಕೆ ಕರೆ ಬರುವ ನಿರೀಕ್ಷೆಯಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ