ಮುಂಬೈ: ಬಿಸಿಸಿಐ ಆಡಳಿತ ವ್ಯವಸ್ಥೆಯೇ ಬದಲಾಗಿದೆ. ನಾಯಕನೂ ಬದಲಾಗಿದ್ದಾರೆ. ಹಾಗಿರುವಾಗ ಆಟಗಾರರೂ ಹಾಗೇ ಕಾಣಿಸಿಕೊಂಡರೆ ಸಾಕೇ? ಹೀಗಾಗಿ ಕ್ರಿಕೆಟಿಗರ ಜೆರ್ಸಿ ಬದಲಾವಣೆಗೆ ಬಿಸಿಸಿಐ ನಿರ್ಧರಿಸಿದೆ.
ಗುರುವಾರ ಬಿಸಿಸಿಐ ಎಲ್ಲಾ ಮಾದರಿಯ ಆಟಗಾರರ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದೆ. ಇದು 4ಡಿ ಕ್ವಿಕ್ ನೆಸ್ ಸಮವಸ್ತ್ರಗಳಂತೆ. ಅಂದರೆ, ಚುರುಕಿನ ಮತ್ತು ಎಲ್ಲಾ ಹವಾಮಾನಕ್ಕೆ ತಕ್ಕಂತೆ ಹೊಂದಿಕೊಂಡು ಆಟಗಾರರನ್ನು ಕೂಲ್ ಆಗಿರಿಸಲು ಸಹಾಯ ಮಾಡುವ ಜೆರ್ಸಿಗಳಂತೆ.
ಇನ್ನೊಂದು ಮುಖ್ಯ ಆಕರ್ಷಣೆ ಎಂದರೆ ಈ ಜೆರ್ಸಿ ಧರಿಸಿದ ಮೇಲೆ ಆಟಗಾರರ ಗಮನ ಬೇರೆ ಕಡೆ ಸೆಳೆಯುವದಿಲ್ಲವಂತೆ. ಆಟದ ಮೇಲೆಯೇ ಇರುತ್ತದೆ ಎನ್ನುವುದು ಬಿಸಿಸಿಐ ಹೇಳಿಕೆ. ಹೀಗಾದರೂ ಆಟಗಾರರು ಗ್ಯಾಲರಿಯಲ್ಲಿ ಕೂತಿರುವ ತಮ್ಮ ಗೆಳತಿಗೆ, ಪತ್ನಿಗೆ, ಚೆಂದದ ಹುಡುಗಿಯರ ಕಡೆಗೆ ಗಮನ ಹರಿಸದೇ ಆಟದ ಕಡೆಗೇ ಗಮನ ಕೊಡುತ್ತಾರೋ ನೋಡಬೇಕು.
ನೈಕ್ ಸ್ಪೋರ್ಟ್ಸ್ ಉತ್ಪನ್ನ ಸಂಸ್ಥೆ ಇದನ್ನು ವಿನ್ಯಾಸಗೊಳಿಸಿದ್ದು, ಶೀಘ್ರದಲ್ಲೇ ನೈಕ್ ಮಳಿಗೆಗಳಲ್ಲಿ ಇದನ್ನು ನೀವು ಕಾಣಬಹುದು. ಟೀಂ ಇಂಡಿಯಾ ಇಂಗ್ಲೆಂಡ್ ಸರಣಿಯಲ್ಲಿ ಈ ಸಮವಸ್ತ್ರ ಧರಿಸಿ ಆಡಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ