ಟೀಂ ಇಂಡಿಯಾ ಕಟ್ಟಿದ್ದು ‘ದಾದ’ ಅಲ್ಲ, ದ್ರಾವಿಡ್: ಕುತೂಹಲ ಕೆರಳಿಸಿದ ರೈನಾ ಮಾತು

Webdunia
ಸೋಮವಾರ, 14 ಜೂನ್ 2021 (09:37 IST)
ಮುಂಬೈ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರ ಸುರೇಶ್ ರೈನಾ ತಮ್ಮ ಆತ್ಮಕತೆ ‘ಬಿಲೀವ್’ ಪುಸ್ತಕದಲ್ಲಿ ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.


ಅದರಲ್ಲೂ ಟೀಂ ಇಂಡಿಯಾ ಕಟ್ಟಿದ್ದು, ಸೌರವ್ ಗಂಗೂಲಿ, ಧೋನಿ ಅಲ್ಲ, ಬದಲಾಗಿ ರಾಹುಲ್ ದ್ರಾವಿಡ್ ಎನ್ನುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ‘ದಾದ’ ಒಬ್ಬರೇ ತಂಡ ಕಟ್ಟಿದರು ಎಂದು ನಾನೆಲ್ಲಿಯೂ ಹೇಳಿಕೊಂಡಿಲ್ಲ ಎಂದ ರೈನಾ ದ್ರಾವಿಡ್ ಬಗ್ಗೆ ವಿಶೇಷವಾಗಿ ಹೊಗಳಿದ್ದಾರೆ.

‘ರಾಹುಲ್ ನಮಗೆ ಕುಟುಂಬ ಸದಸ್ಯರಂತಿದ್ದರು. ಕಿರಿಯ ಆಟಗಾರರಿಗಾಗಿ ಯಾವತ್ತೂ ಫೈಟ್ ಮಾಡ್ತಿದ್ದರು. ಅವರಿಗೆ ಯುವ ಆಟಗಾರರು ಮುಖ್ಯವಾಗಿದ್ದರು. ಅವರ ಅಡಿಯಲ್ಲಿ ಪಳಗಿದ ಆಟಗಾರರನ್ನು ನೋಡಿ. ಮುಂದಿನ ದಶಕದವರೆಗೂ ಅವರು ಟೀಂ ಇಂಡಿಯಾವನ್ನು ಆಳುತ್ತಾರೆ. ಧೋನಿ, ಯುವರಾಜ್, ಶ್ರೀಶಾಂತ್, ಪಿಯೂಷ್ ಚಾವ್ಲಾ ಜೊತೆಗೆ ನಾನೂ ಇದರಲ್ಲಿ ಸೇರಿದ್ದೇನೆ.  ನಮ್ಮಂತಹ ಯುವ ಆಟಗಾರರ ಪ್ರಾಮುಖ್ಯತೆ ಅವರಿಗೆ ಗೊತ್ತಿತ್ತು.

ಎಲ್ಲರೂ ಟೀಂ ಇಂಡಿಯಾವನ್ನು ಕಟ್ಟಿದ್ದು ಯಾರು ಎಂಬ ಪ್ರಶ್ನೆಗೆ ಗಂಗೂಲಿ, ಧೋನಿ ಹೆಸರು ಹೇಳುತ್ತಾರೆ. ಆದರೆ ನನ್ನ ಪ್ರಕಾಋ ತಂಡ ಕಟ್ಟಿದ್ದು ದ್ರಾವಿಡ್. ಗಂಗೂಲಿ, ಧೋನಿ ಉತ್ತಮ ನಾಯಕರಾಗಿ ತಂಡವನ್ನು ಮುನ್ನಡೆಸಿದರು. ಆದರೆ ಮೂರೂ ಮಾದರಿಯಲ್ಲಿ ತಂಡ ಕಟ್ಟಿದ್ದು ದ್ರಾವಿಡ್’ ಎಂದು ರೈನಾ ತಮ್ಮ ಪುಸ್ತಕದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಏನೂ ಸಾಧಿಸದವರೆಲ್ಲಾ ಕೊಹ್ಲಿ, ರೋಹಿತ್ ಭವಿಷ್ಯ ನಿರ್ಧರಿಸುತ್ತಿದ್ದಾರೆ, ನನಗೂ ಹೀಗೇ ಆಗಿದೆ ಎಂದ ಹರ್ಭಜನ್

ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿಗೆ ಕಾರಣ ಬಿಚ್ಚಿಟ್ಟ ರಾಹುಲ್‌: ಬೌಲರ್‌ಗಳನ್ನು ಪ್ರಶಂಸಿಸಿದ ನಾಯಕ

ಮೈದಾನದಲ್ಲಿ ವಿರಾಟ್ ಕೊಹ್ಲಿ ಮಿಮಿಕ್ರಿ: ರೋಹಿತ್ ಶರ್ಮಾಗೆ ನಗುವೋ ನಗು video

ನಿನ್ ತಲೆ ಓಡಿಸ್ಬೇಡ, ಹೇಳಿದ್ದು ಹಾಕು: ಪ್ರಸಿದ್ಧ ಕೃಷ್ಣಗೆ ಕನ್ನಡದಲ್ಲೇ ಬೈದ ಕೆಎಲ್ ರಾಹುಲ್ Video

ಪ್ರಸಿದ್ಧ ಕೃಷ್ಣ ರನ್ ಮೆಷಿನ್: ಈತನನ್ನು ಹೇಗೆ ಪ್ರಮುಖ ಬೌಲರ್ ಅಂತ ಟೀಂನಲ್ಲಿ ಇಟ್ಕೊಂಡಿದ್ದಾರೆ

ಮುಂದಿನ ಸುದ್ದಿ
Show comments