Select Your Language

Notifications

webdunia
webdunia
webdunia
webdunia

ಕೊಹ್ಲಿ, ಸಚಿನ್ ತೆಂಡುಲ್ಕರ್ ಕಡೆಗಣಿಸಿದ ಸುನಿಲ್ ಗವಾಸ್ಕರ್!

ವಿರಾಟ್ ಕೊಹ್ಲಿ
ಮುಂಬೈ: ಟೀಂ ಇಂಡಿಯಾ ಇದುವರೆಗೆ ಕಂಡ ಅದ್ಭುತ ಮ್ಯಾಚ್ ವಿನ್ನರ್ ಯಾರು? ಹೀಗೊಂದು ಪ್ರಶ್ನೆಗೆ ಬ್ಯಾಟಿಂಗ್ ದಂತಕತೆ ಸುನಿಲ್ ಗವಾಸ್ಕರ್ ಕೊಹ್ಲಿ, ತೆಂಡುಲ್ಕರ್ ಹೆಸರನ್ನು ಬದಿಗೊತ್ತಿ ಕಪಿಲ್ ದೇವ್ ಗೆ ಮತ ಹಾಕಿದ್ದಾರೆ.

 
ಸಚಿನ್ ಮತ್ತು ಕೊಹ್ಲಿ ಆಟಗಾರರೇ ಇರಬಹುದು. ಅವರು ಕೇಬಲ್ ಟಿವಿ ಜಮಾನದಲ್ಲಿದ್ದ ಕಾರಣ ಜನರಿಗೆ ಅವರ ಆಟ ಚೆನ್ನಾಗಿ ಗೊತ್ತಿತ್ತು. ಆದರೆ ಇದಕ್ಕಿಂತ ಮೊದಲೇ ಭಾರತ ತಂಡದಲ್ಲಿದ್ದ ಕಪಿಲ್ ದೇವ್ ಎಂತಹ ಅದ್ಭುತ ಮ್ಯಾಚ್ ವಿನ್ನರ್ ಎನ್ನುವುದು ಇಂದಿನ ಹಲವರಿಗೆ ಗೊತ್ತಿಲ್ಲ. ಕಪಿಲ್ ಭಾರತಕ್ಕಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ಪಂದ್ಯ ಗೆಲ್ಲಿಸಿಕೊಟ್ಟವರು.

ಅವರ ಸಾಹಸಕ್ಕೆ 1983 ರ ವಿಶ್ವಕಪ್ ಗೆಲುವೇ ಸಾಕ್ಷಿ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಇದರೊಂದಿಗೆ ತೆಂಡುಲ್ಕರ್-ಕೊಹ್ಲಿ ನಡುವೆ ಹೋಲಿಕೆ ಮಾಡುತ್ತಿದ್ದವರಿಗೆ ಅವರನ್ನು ಮೀರಿದ ಆಟಗಾರರೊಬ್ಬರಿದ್ದಾರೆ ಎನ್ನುವುದನ್ನು ನೆನಪಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬೆಳ್ಳಂ ಬೆಳಿಗ್ಗೆ ಟೀಂ ಇಂಡಿಯಾಗೆ ಕೆಟ್ಟ ಸುದ್ದಿ