Publish Date: Sat, 22 Jul 2017 (08:55 IST)
Updated Date: Sat, 22 Jul 2017 (08:57 IST)
ಕೊಲೊಂಬೋ: ಮಹತ್ವದ ಭಾರತ ಸರಣಿಗೆ ಸಜ್ಜುಗೊಳ್ಳುತ್ತಿರುವ ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಹೊಸದಾಗಿ ತಂಡದ ನಾಯಕನಾಗಿ ಆಯ್ಕೆಯಾಗಿರುವ ದಿನೇಶ್ ಚಂಡಿಮಾಲ್ ಮೊದಲ ಟೆಸ್ಟ್ ಗೆ ಅಲಭ್ಯರಾಗಿರುತ್ತಾರೆ.
ನ್ಯುಮೋನಿಯಾ ಜ್ವರದಿಂದ ಬಳಲುತ್ತಿರುವ ಚಂಡಿಮಾಲ್ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಮೊದಲ ಟೆಸ್ಟ್ ಪಂದ್ಯವನ್ನಂತೂ ತಪ್ಪಿಸಿಕೊಳ್ಳಲಿದ್ದಾರೆ ಎಂದು ಶ್ರೀಲಂಕಾ ತಂಡದ ಮ್ಯಾನೇಜರ್ ತಿಳಿಸಿದ್ದಾರೆ.
ಗಾಲೆಯಲ್ಲಿ ಜುಲೈ 27 ರಿಂದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಚಂಡಿಮಾಲ್ ಅನುಪಸ್ಥಿತಿಯಲ್ಲಿ ಹಿರಿಯ ಸ್ಪಿನ್ನರ್ ರಂಗನಾ ಹೆರಾತ್ ತಂಡವನ್ನು ಮುನ್ನಡೆಸಲಿದ್ದಾರೆ. ನಾಯಕನಾದ ಮೊದಲ ಪಂದ್ಯದಲ್ಲೇ ಚಂಡಿಮಾಲ್ ಗೆ ಅನಾರೋಗ್ಯ ಕಾಡಿರುವುದು ನಿಜಕ್ಕೂ ದುರದೃಷ್ಟಕರವೇ ಸರಿ.