Publish Date: Wed, 16 Dec 2020 (09:50 IST)
Updated Date: Wed, 16 Dec 2020 (09:52 IST)
ಕೊಚ್ಚಿ: ಮ್ಯಾಚ್ ಫಿಕ್ಸಿಂಗ್ ಕಳಂಕದಿಂದಾಗಿ ಕ್ರಿಕೆಟ್ ನಿಂದ ದೂರವಾಗಿದ್ದ ವೇಗಿ ಶ್ರೀಶಾಂತ್ ಕ್ರಿಕೆಟ್ ಅಂಕಣಕ್ಕೆ ಮರಳಲಿದ್ದಾರೆ. ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಗೆ ಕೇರಳ ತಂಡದ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಶ್ರೀಶಾಂತ್ ಸ್ಥಾನ ಪಡೆದಿದ್ದಾರೆ.
ನಿಷೇಧ ಶಿಕ್ಷೆ ಮುಗಿಸಿ ಇದೇ ಮೊದಲ ಬಾರಿಗೆ ಶ್ರೀಶಾಂತ್ ಕ್ರಿಕೆಟ್ ಅಂಗಣಕ್ಕೆ ಮರಳುತ್ತಿದ್ದಾರೆ. ಜನವರಿ 2 ರಿಂದ ಟೂರ್ನಮೆಂಟ್ ಆರಂಭವಾಗಲಿದ್ದು, ಅಂತಿಮ ತಂಡದಲ್ಲಿ 37 ವರ್ಷದ ಶ್ರೀಶಾಂತ್ ಸ್ಥಾನ ಪಡೆಯಲಿದ್ದಾರಾ ಕಾದು ನೋಡಬೇಕಿದೆ.