Select Your Language

Notifications

webdunia
webdunia
webdunia
webdunia

ಧೋನಿ ಬ್ಯಾಟಿಂಗ್ ಕ್ರಮಾಂಕ ಬದಲಾವಣೆ ಬೇಡವೆಂದ ಗಂಗೂಲಿ

ಧೋನಿ ಬ್ಯಾಟಿಂಗ್ ಕ್ರಮಾಂಕ ಬದಲಾವಣೆ ಬೇಡವೆಂದ ಗಂಗೂಲಿ
Kolkata , ಶುಕ್ರವಾರ, 28 ಅಕ್ಟೋಬರ್ 2016 (08:56 IST)
ಕೋಲ್ಕತ್ತಾ:  ಮಹೇಂದ್ರ ಸಿಂಗ್ ಧೋನಿ ಯಾವತ್ತಿಗೂ ಬ್ಯಾಟಿಂಗ್ ಕ್ರಮಾಂಕ ಬದಲಾವಣೆ ಮಾಡಬಾರದು ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

ಧೋನಿ ಈಗ ಬ್ಯಾಟಿಂಗ್ ಮಾಡುತ್ತಿರುವಂತೆ ನಾಲ್ಕನೇ ಕ್ರಮಾಂಕದಲ್ಲೇ ಮುಂದುವರಿಯಬೇಕು. ಅದರಿಂದ ಅವರಿಗೆ ವಿರಾಟ್ ಕೊಹ್ಲಿ ಜತೆ ಬ್ಯಾಟಿಂಗ್ ಮಾಡಲು ಅವಕಾಶ ಸಿಗುತ್ತದೆ. ಅವರಿಬ್ಬರೂ ಸೇರಿಕೊಂಡು ಪಂದ್ಯ ಮುಗಿಸಬಹುದು ಎಂದು ಅವರು ಹೇಳಿದ್ದಾರೆ.

“ಗೇಮ್ ಫಿನಿಶರ್ ಅಂದರೆ ಆತ 40 ಓವರ್ ನ ನಂತರವೇ ಕ್ರೀಸ್ ಗೆ ಬರಬೇಕೆಂದಿಲ್ಲ. ವಿರಾಟ್ ಕೂಡಾ ನಂ.3 ಕ್ರಮಾಂಕದಲ್ಲಿ ಆಡುತ್ತಿದ್ದಾರೆ. ಅವರು ಹಲವು ಪಂದ್ಯಗಳನ್ನು ಮುಗಿಸಿಕೊಟ್ಟಿಲ್ಲವೇ? ಫಿನಿಶರ್ ಕೆಳ ಕ್ರಮಾಂಕದಲ್ಲೇ ಬರಬೇಕೆಂಬುದು ತಪ್ಪು ಕಲ್ಪನೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕೊಹ್ಲಿ ಮೇಲೆ ಭಾರತ ಹೆಚ್ಚು ಅವಲಂಬಿತವಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು “ನನಗೆ ಹಾಗನಿಸುತ್ತಿಲ್ಲ. ನ್ಯೂಜಿಲೆಂಡ್ ಕೂಡಾ ಉತ್ತಮ ತಂಡವಾಗಿದ್ದು, ಕೆಲವು ಪಂದ್ಯಗಳನ್ನು ಗೆಲ್ಲುತ್ತಿದ್ದಾರೆ” ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಣಜಿ ಟ್ರೋಫಿ: ಅಸ್ಸಾಂ ಸಾಧಾರಣ ಮೊತ್ತ