ಎಡವಟ್ಟು ಮಾಡಿ ಯುವರಾಜ್ ಸಿಂಗ್ ರಿಂದ ನಗೆಪಾಟಲಿಗೀಡಾದ ಶಿಖರ್ ಧವನ್

Webdunia
ಬುಧವಾರ, 26 ಜುಲೈ 2017 (10:47 IST)
ಕೊಲೊಂಬೋ: ಒಪೊ ಮೊಬೈಲ್ ಕಂಪನಿ ಟೀಂ ಇಂಡಿಯಾ ಪ್ರಾಯೋಜಕತ್ವ ವಹಿಸಿಕೊಂಡ ಮೇಲೆ ಇದೇ ಮೊದಲ ಬಾರಿಗೆ ಟೆಸ್ಟ್ ಪಂದ್ಯ ನಡೆಯುತ್ತಿದೆ. ಹೀಗಾಗಿ ಹೊಸ ದಿರಿಸಿನಲ್ಲಿ ಭಾರತೀಯ ಆಟಗಾರರು ಫೋಟೋಗೆ ಪೋಸ್ ನೀಡಿದ್ದಾರೆ.


ನಾಯಕ ಕೊಹ್ಲಿ ಸೇರಿದಂತೆ ಎಲ್ಲಾ ಆಟಗಾರರೂ ಹೊಸ ದಿರಿಸು ಧರಿಸಿ ಅಫೀಷಿಯಲ್ ಆಗಿ ಫೋಟೋ ತೆಗೆಸಿಕೊಂಡಿದ್ದಾರೆ. ಆದರೆ ಶಿಖರ್ ಧವನ್ ಫೋಟೋ ಮಾತ್ರ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಅದೀಗ ಯುವರಾಜ್ ಸಿಂಗ್ ಗೆ ತಮಾಷೆಯ ವಸ್ತುವಾಗಿದೆ.

ಶಿಖರ್ ಫೋಟೋ ತೆಗೆಯುವಾಗ ಕಾಲಿಗೆ ಶೂ ಹಾಕಿಕೊಂಡಿರಲಿಲ್ಲ. ಮೇಲಿನಿಂದ ಎಲ್ಲವೂ ಫಿಟ್ ಆಗಿದ್ದು, ಕಾಲಿಗೆ ಮಾತ್ರ ಮಾಮೂಲು ಚಪ್ಪಲಿ ಧರಿಸಿ ಫೋಟೋ ತೆಗೆಸಿಕೊಂಡಿರುವುದನ್ನು ಟ್ವಿಟರ್ ನಲ್ಲಿ ತಮಾಷೆ ಮಾಡಿಕೊಂಡಿರುವ ಯುವರಾಜ್ ಸಿಂಗ್ ‘ಮೊದಲು ಕಾಲಿಗೊಂದು ಶೂ ಹಾಕಿಕೊಳ್ಳೋ..’ ಎಂದು ಕಾಲೆಳೆದಿದ್ದಾರೆ.

ಇದಕ್ಕೆ ಉತ್ತರಿಸಿರುವ ಶಿಖರ್ ಧವನ್, ‘ಫುಲ್ ಫೋಟೋ ತೆಗೆಯುತ್ತಾರೆಂದು ಗೊತ್ತಿರಲಿಲ್ಲ. ಅದಕ್ಕೇ ಚಪ್ಪಲಿ ಹಾಕಿಕೊಂಡೆ’ ಎಂದು ತಮ್ಮ ಎಡವಟ್ಟನ್ನು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ..  ವೈರಲ್ ಆಯ್ತು ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Video: ಪಂದ್ಯ ಮುಗಿದರೂ ಇಳಿಯದ ಗಂಭೀರ್ ಸಿಟ್ಟು: ದ್ರಾವಿಡ್ ಹೀಗರ್ಲಿಲ್ಲ ಎಂದ ಫ್ಯಾನ್ಸ್

ಒಂದೇ ಓವರ್ ನಲ್ಲಿ 7 ವೈಡ್ ಎಸೆದ ಅರ್ಷ್ ದೀಪ್ ಸಿಂಗ್: ಗಂಭೀರ್ ಹೊಡೆಯೋದೊಂದೇ ಬಾಕಿ video

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಶಾಕ್ ಕೊಡಲು ಮುಂದಾದ ಬಿಸಿಸಿಐ

ಟೀಂ ಇಂಡಿಯಾ ಎಲ್ಲಾ ಕ್ರಿಕೆಟಿಗರಿಗೂ ಬೇಡದ ಅಭ್ಯಾಸಗಳೆಲ್ಲಾ ಇದೆ: ವಿವಾದಕ್ಕೆ ಕಾರಣವಾದ ರವೀಂದ್ರ ಜಡೇಜಾ ಪತ್ನಿ

ಮದುವೆ ಮುರಿದಿದ್ದಕ್ಕೆ ಕುಗ್ಗಿದ್ದಾರಾ ಸ್ಮೃತಿ ಮಂಧಾನ: ಒಂದೇ ಸಾಲಿನಲ್ಲಿ ಕೊಟ್ರು ಉತ್ತರ

ಮುಂದಿನ ಸುದ್ದಿ
Show comments