ಮುಂಬೈ ಏರ್ ಪೋರ್ಟ್ ನಿಂದ ಹೊರಬರಲು ಕಷ್ಟಪಟ್ಟ ಮಿಥಾಲಿ ರಾಜ್ ಮತ್ತು ಬಳಗ

Webdunia
ಬುಧವಾರ, 26 ಜುಲೈ 2017 (10:20 IST)
ಮುಂಬೈ: ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ತೆರಳುವಾಗ ಭಾರತ ತಂಡ ಹೋಗಿದ್ದೂ ಯಾರಿಗೂ ಗೊತ್ತಾಗಲೇ ಇಲ್ಲ. ಆದರೆ ಬರುವಾಗ ಹೀರೋಗಳಾಗಿ ಬಂದ ಕ್ರಿಕೆಟ್ ಆಟಗಾರ್ತಿಯರು ತಮ್ಮ ಗಮ್ಯ ತಲುಪಲು ಕಷ್ಟಪಡುವಂತಾಯಿತು.


ಮಹಿಳಾ ಕ್ರಿಕೆಟರುಗಳಾದ ಮಿಥಾಲಿ ರಾಜ್, ಹರ್ಮನ್ ಪ್ರೀತ್ ಕೌರ್,  ಜೂಲನ್ ಗೋಸ್ವಾಮಿ, ಪೂನಂ ರಾವತ್, ದೀಪ್ತಿ ಶರ್ಮಾ, ಸ್ಮೃತಿ ಮಂದಣ್ಣ, ಶಿಖಾ ಪಾಂಡೆ, ಸುಷ್ಮಾ ವರ್ಮಾ ಇಂದು ಬೆಳಗಿನ ಜಾವ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಉಳಿದ ಆಟಗಾರ್ತಿಯರು ಇಂದು ಇನ್ನೊಂದು ವಿಮಾನದಲ್ಲಿ ಮುಂಬೈಗೆ ಬಂದಿಳಿಯಲಿದ್ದಾರೆ.

ಬಹುಶಃ ಭಾರತ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿಯೇ ಇದುವರೆಗೆ ಮಹಿಳೆಯರಿಗೆ ಇಷ್ಟು ಅದ್ಭುತ ಸ್ವಾಗತ ದೊರಕಿರಲಿಲ್ಲವೇನೋ. ಮಹಿಳಾ ಕ್ರಿಕೆಟರುಗಳು ವಿಮಾನ ಇಳಿಯುತ್ತಿದ್ದರೆ, ನೂರಾರು ಮಂದಿ ಅಭಿಮಾನಿಗಳು ನಿಲ್ದಾಣದಲ್ಲಿ ಅವರನ್ನು ಸ್ವಾಗತಿಸಲು ಜಮಾಯಿಸಿದ್ದರು. ‘ಇಂಡಿಯಾ ಇಂಡಿಯಾ’ ಎಂದು ಘೋಷಣೆ ಕೂಗಿ ಆಟಗಾರರನ್ನು ಅಭಿಮಾನಿಗಳು ಸ್ವಾಗತಿಸಿದರು.

ಕೊನೆಗೆ ಪೊಲೀಸರು ಹರಸಾಹಸ ಪಟ್ಟು ಈ ಹೊಸ ನಾಯಕಿಯರನ್ನು ವಿಮಾನ ನಿಲ್ದಾಣದಿಂದ ಹೊರ ಕಳುಹಿಸಿದರು. ಅಭಿಮಾನಿಗಳು ತಮ್ಮ ಮೆಚ್ಚಿನ ತಾರೆಯರ ಫೋಟೋ, ಸೆಲ್ಫೀ ತೆಗೆದು ಖುಷಿಪಟ್ಟರು.

ಇದನ್ನೂ ಓದಿ..  ಡೆಂಗ್ಯೂಗೆ ಶಾಸಕ ವರ್ತೂರ್ ಪ್ರಕಾಶ್ ಪತ್ನಿ ಬಲಿ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SA: ಎರಡನೇ ಟೆಸ್ಟ್ ಸೋಲುವ ಭೀತಿಯಲ್ಲಿ ಟೀಂ ಇಂಡಿಯಾ

IND vs SA: 82 ಬಾಲ್, 14 ರನ್.. ಅಬ್ಬಬ್ಬಾ ಕುಲದೀಪ್ ಯಾದವ್ ಗೆ ಏನು ತಾಳ್ಮೆ ಗುರೂ

IND vs SA: ಟೀಂ ಇಂಡಿಯಾಕ್ಕೆ ಟೆಸ್ಟ್ ನಲ್ಲಿ ತವರಿನಲ್ಲೇ ಇಂಥಾ ಸ್ಥಿತಿ ಯಾವತ್ತೂ ಇರಲಿಲ್ಲ

ಮಹಿಳಾ ಏಕದಿನ ವಿಶ್ವಕಪ್‌ ಗೆದ್ದ ಬೆನ್ನಲ್ಲೇ ಚೊಚ್ಚಲ ಅಂಧರ ಟಿ20 ವಿಶ್ವಕಪ್ ಕಿರೀಟ ಜಯಿಸಿದ ಭಾರತ

IND vs SA: ಏಕದಿನ ಸರಣಿಗೆ ಭಾರತ ತಂಡ ಪ್ರಕಟ, ಕನ್ನಡಿಗ ರಾಹುಲ್‌ಗೆ ಒಲಿದ ನಾಯಕತ್ವ

ಮುಂದಿನ ಸುದ್ದಿ
Show comments