Publish Date: Sat, 24 Dec 2016 (08:37 IST)
Updated Date: Sat, 24 Dec 2016 (08:39 IST)
ನವದೆಹಲಿ: ಕ್ರಿಕೆಟಿಗ ಶಿಖರ್ ಧವನ್ ಗಾಯಗೊಂಡು ಸದ್ಯಕ್ಕೆ ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ. ಕ್ರಿಕೆಟ್ ನಿಂದ ಸಿಕ್ಕಿರುವ ಈ ಬ್ರೇಕ್ ನ್ನು ಅವರು ಚೆನ್ನಾಗಿಯೇ ಸದುಪಯೋಗಪಡಿಸುತ್ತಿದ್ದಾರೆ. ಸದ್ಯ ಹಾಲಿಡೇ ಮೂಡ್ ನಲ್ಲಿರುವ ಶಿಖರ್ ಧವನ್ ಎಲ್ಲಿಗೆ ಹೋಗಿದ್ದು ಗೊತ್ತಾ?
ಮೇಘಾಲಯದ ಪೂರ್ವ ಕಾಶಿ ಬೆಟ್ಟಕ್ಕೆ ಪ್ರವಾಸ ಹೋಗಿದ್ದಾರೆ. ಇಲ್ಲಿನ ಉಮನ್ ಗೋಟ್ ನದಿ ತಟದಲ್ಲಿ ಸಂಸಾರ ಸಮೇತ ಬೀಡು ಬಿಟ್ಟಿದ್ದಾರೆ. ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋತಿದ್ದಾರೆ. ಆ ಮೂಲಕ ತಮ್ಮ ಹಾಲಿಡೇಯನ್ನು ಭರ್ಜರಿಯಾಗಿಯೇ ಕಳೆಯುತ್ತಿದ್ದಾರೆ.
ಇಲ್ಲಿ ಬೋಟಿಂಗ್ ನಡೆಸುತ್ತಾ ಸ್ಕೂಬಾ ಡೈವಿಂಗ್ ಮಾಡುತ್ತಾ ಕುಟುಂಬದ ಜತೆ ಒಂದು ರಾತ್ರಿ ಕಳೆದಿದ್ದಾರೆ ಎಂದು ಇಲ್ಲಿನ ಕೌನ್ಸೆಲರ್ ಹೇಳಿದ್ದಾರೆ. ಅಂತೂ ಕ್ರಿಕೆಟಿಗ ತನಗೆ ಸಿಕ್ಕಿದ ಬಿಡುವಿನ ವೇಳೆಯನ್ನು ಚೆನ್ನಾಗಿಯೇ ಎಂಜಾಯ್ ಮಾಡುತ್ತಿದ್ದಾರೆಂದಾಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ