Publish Date: Fri, 25 Dec 2020 (09:31 IST)
Updated Date: Fri, 25 Dec 2020 (09:33 IST)
ಮೆಲ್ಬೋರ್ನ್: ವಿರಾಟ್ ಕೊಹ್ಲಿಯಿಲ್ಲದ ಟೀಂ ಇಂಡಿಯಾ ಆಸ್ಟ್ರೇಲಿಯಾಗೆ ಲೆಕ್ಕಕ್ಕೇ ಇಲ್ಲ. ಭಾರತವನ್ನು ನಾವು ಧೂಳೀಪಟ ಮಾಡಲಿದ್ದೇವೆ ಎಂದು ಆಸೀಸ್ ಮಾಜಿ ಸ್ಪಿನ್ನರ್ ಶೇನ್ ವಾರ್ನ್ ಹೇಳಿದ್ದಾರೆ.
ವಿರಾಟ್ ಇಲ್ಲದಿದ್ದರೂ ನಮ್ಮಲ್ಲಿ ರೆಹಾನೆ ಇದ್ದಾರೆ, ಕೆಎಲ್ ರಾಹುಲ್ ರಂತಹ ಪ್ರತಿಭಾವಂತರು, ಶಬ್ನಂ ಗಿಲ್ ರಂತಹ ಯುವ ಸ್ಪೋಟಕ ಬ್ಯಾಟ್ಸ್ ಮನ್ ಗಳು ಇದ್ದಾರೆ ಎಂದು ಅವರು ಹೇಳುತ್ತಿದ್ದಾರೆ. ಆದರೆ ಚೇತೇಶ್ವರ ಪೂಜಾರ ಅವರಂತಹ ಬ್ಯಾಟ್ಸ್ ಮನ್ ಗಳ ಕೈಲಿ ಎಷ್ಟು ಸಾಮರ್ಥ್ಯವಿದೆ ಎಂದು ನಮಗೆ ಗೊತ್ತು ಎಂದು ವಾರ್ನ್ ಟೀಂ ಇಂಡಿಯಾವನ್ನು ಉಡಾಫೆ ಮಾಡಿದ್ದಾರೆ.