ಆತ್ಮಕತೆಯಲ್ಲೂ ಗೌತಮ್ ಗಂಭಿರ್ ವಿರುದ್ಧ ವಾಗ್ದಾಳಿ ನಡೆಸಿದ ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರಿದಿ

Webdunia
ಶನಿವಾರ, 4 ಮೇ 2019 (08:02 IST)
ಕರಾಚಿ: ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಮತ್ತು ಭಾರತೀಯ ಕ್ರಿಕೆಟಿಗ ಗೌತಮ್ ಗಂಭೀರ್ ನಡುವೆ ಎಂಥಾ ಧ್ವೇಷವಿತ್ತು ಎಂಬುದನ್ನು ಕ್ರಿಕೆಟ್ ಪ್ರಿಯರು ತಿಳಿದಿರುತ್ತಾರೆ. ಈ ಇಬ್ಬರೂ ಕ್ರಿಕೆಟಿಗರು 2007 ರ ಏಷ್ಯಾ ಕಪ್ ನಲ್ಲಿ ಕೈ ಕೈ ಮಿಲಾಯಿಸುವ ಹಂತಕ್ಕೆ ಜಗಳವಾಡಿದ್ದು ಇಂದಿಗೂ ನೆನಪಿನಲ್ಲಿದೆ.


ಇದೀಗ ಶಾಹಿದ್ ಅಫ್ರಿದಿ ತಮ್ಮ ಆತ್ಮಕತೆ ‘ಗೇಮ್ ಚೇಂಜರ್’ ನಲ್ಲಿ ಗಂಭೀರ್ ಬಗ್ಗೆ ಮತ್ತೆ ಅಂದಿನ ಘಟನೆ ಉಲ್ಲೇಖಿಸಿ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಗಂಭೀರ್ ಋಣಾತ್ಮಕ ಚಿಂತನೆಯ ಹುಂಬ ಎಂದು ಟೀಕಿಸಿದ್ದಾರೆ.

‘ಅಂದು ಏಷ್ಯಾ ಕಪ್ ನಲ್ಲಿ ಗಂಭೀರ್ ಸಿಂಗಲ್ ರನ್ ತೆಗೆದು ನನ್ನ ಬಳಿ ಓಡಿ ಬರುತ್ತಿದ್ದಾಗ ಈ ಜಗಳಕ್ಕೆ ನಾನೇ ಮಂಗಳ ಹಾಡಬೇಕು ಎಂದುಕೊಂಡಿದ್ದೆ. ನಮ್ಮಿಬ್ಬರ ನಡುವೆ ಜಗಳ ಯಾವ ಮಟ್ಟಿಗೆ ತಲುಪಿತ್ತು ಎಂದರೆ ಇಬ್ಬರೂ ತಮ್ಮ ತಮ್ಮ ಮನೆಯ ಹೆಣ್ಣುಮಕ್ಕಳ ಹೆಸರೆತ್ತಿ ಹೀಯಾಳಿಸಿದ್ದೆವು. ನನಗೆ ಇಂತಹ ಆಕ್ರಮಣಕಾರಿ ಸ್ವಭಾವದವರೆಂದರೆ ಇಷ್ಟ. ಆದರೆ ಗಂಭೀರ್ ಆಕ್ರಮಣಕಾರಿ ಅಲ್ಲದೆ, ಋಣಾತ್ಮಕ ವ್ಯಕ್ತಿತ್ವದವರು. ಇಂತಹವರನ್ನು ನನಗೆ ಇಷ್ಟವಾಗಲ್ಲ’ ಎಂದು ಅಫ್ರಿದಿ ಟೀಕಾಪ್ರಹಾರ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಫಾರ್ಮ್ ಕಳೆದುಕೊಂಡಿದ್ದೀರಾ ಎಂದರೆ ಅಳಿಯ ಅಲ್ಲ ಮಗಳ ಗಂಡ ಎಂದ ಸೂರ್ಯಕುಮಾರ್ ಯಾದವ್

ಹರ್ಷಿತ್ ರಾಣಾಗೆ ಮಾತ್ರ ಸ್ಪೆಷಲ್ ಅಭಿನಂದನೆ ಸಲ್ಲಿಸಿದ ಗಂಭೀರ್: ಇದು ಸರೀನಾ ಎಂದ ಫ್ಯಾನ್ಸ್ video

ಮೆಸ್ಸಿ ಕಾರ್ಯಕ್ರಮದ ಮುಖ್ಯ ಆಯೋಜಕ ಶತಾದ್ರು ದತ್ತಗೆ ಬಿಗ್‌ ಶಾಕ್

ಮೆಸ್ಸಿ ಕಾರ್ಯಕ್ರಮಕ್ಕೆ ನಿರಾಕರಣೆ, ಮಮತಾ ಸರ್ಕಾರದ ವಿರುದ್ಧ ರಾಜ್ಯಪಾಲರ ಪ್ರಶ್ನೆ

ಟೀಂ ಇಂಡಿಯಾದ ಮತ್ತೊಬ್ಬ ಆಟಗಾರನನ್ನೂ ಇದ್ದೂ ಇಲ್ಲದಂತೆ ಸೈಡ್ ಲೈನ್ ಮಾಡುತ್ತಿದ್ದಾರಾ ಗಂಭೀರ್

ಮುಂದಿನ ಸುದ್ದಿ
Show comments