Select Your Language

Notifications

webdunia
webdunia
webdunia
webdunia

ನನಗೆ ಇಷ್ಟವಾಗಿದ್ದನ್ನು ಟ್ವೀಟ್ ಮಾಡುತ್ತೇನೆ ಎಂದ ಸೆಹ್ವಾಗ್

ನನಗೆ ಇಷ್ಟವಾಗಿದ್ದನ್ನು ಟ್ವೀಟ್ ಮಾಡುತ್ತೇನೆ ಎಂದ ಸೆಹ್ವಾಗ್
NewDelhi , ಭಾನುವಾರ, 23 ಜುಲೈ 2017 (08:20 IST)
ನವದೆಹಲಿ: ವಿಡಂಬನಾತ್ಮಕ ಟ್ವೀಟ್ ಗಳ ಮೂಲಕ ಸುದ್ದಿಯಾಗುವ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ತಮ್ಮ ಟ್ವೀಟ್ ಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನನಗೆ ಇಷ್ಟವಾಗಿದ್ದನ್ನೇ ಟ್ವೀಟ್ ಮಾಡುತ್ತೇನೆ ಎಂದಿದ್ದಾರೆ.


ನನಗೆ ಇಷ್ಟವಾಗಿದ್ದನ್ನು ಟ್ವೀಟ್ ಮಾಡುತ್ತೇನೆ. ಜನ ಏನಾದರೂ ತಿಳಿದುಕೊಂಡರೇ ಎಂದೆಲ್ಲಾ ನಾನು ಯೋಚಿಸಲ್ಲ. ಆ ಟ್ವೀಟ್ ಬಗ್ಗೆ ಜನರು ವ್ಯಕ್ತಪಡಿಸುವ ಪ್ರತಿಕ್ರಿಯೆಗಳಿಗೆ ತಲೆಕೆಡಿಸಿಕೊಳ್ಳಲ್ಲ ಎಂದಿದ್ದಾರೆ.

ಆಂಗ್ಲ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ವೀರೂ ಪಕ್ಕಾ ತಮ್ಮ ಬ್ಯಾಟಿಂಗ್ ಶೈಲಿಯಂತೇ ಮಾತನಾಡಿದ್ದಾರೆ. ಇದುವರೆಗೆ ತಾನು ಮಾಡಿದ ಟ್ವೀಟ್ ಗಳಲ್ಲಿ ಯಾವ ಸಂದೇಶವೂ ಮಾಡಬಾರದಿತ್ತು ಎಂದು ಅನಿಸಿದ ಉದಾಹರಣೆಗಳಿಲ್ಲ ಎಂದು ಅವರು ಇದೇ ಸಂರ್ಭದಲ್ಲಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಫೈನಲ್ ಗೂ ಮೊದಲು ಇಂಗ್ಲೆಂಡ್ ಎಚ್ಚರಿಕೆ ನೀಡಿದ ಮಿಥಾಲಿ ರಾಜ್