ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಂಚಲನ ಮೂಡಿಸಿದ ವಿರಾಟ್ ಕೊಹ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಐಪಿಎಲ್‌ನಲ್ಲಿ ಕೂಡ ಮಿಂಚು ಹರಿಸಿದ್ದಾರೆ. ಅವರ ಪ್ರಸಕ್ತ ಫಾರಂ ಕುರಿತು ಕ್ರಿಕೆಟ್ ಪಂಡಿತರಿಗೆ ವರ್ಣಿಸಲು ಪದಗಳೇ ಸಿಗದಹಾಗಾಗಿದ್ದು, ಯಾವುದೇ ಪಂದ್ಯಕ್ಕೆ ಮುನ್ನ ಸ್ವಯಂ ಸಿದ್ಧತೆ ಕುರಿತು ದೆಹಲಿ ಬ್ಯಾಟ್ಸ್‌ಮನ್ ಬಹಿರಂಗ ಮಾಡಿದ್ದಾರೆ.
ಪ್ರತಿ ಪಂದ್ಯದಲ್ಲಿ ತಾವು ಮೈದಾನಕ್ಕೆ ಇಳಿಯುವಾಗ ತಮ್ಮ ಮನಸ್ಥಿತಿ ಕುರಿತು ಆಸಕ್ತಿದಾಯಕ ಒಳನೋಟವನ್ನು ಕೊಹ್ಲಿ ಬಿಚ್ಚಿಟ್ಟಿದ್ದಾರೆ.
ನಾನು ಮೈದಾನಕ್ಕೆ ಇಳಿಯುವಾಗ ನನ್ನ ಹೃದಯ ಬಡಿತ ಪರೀಕ್ಷಿಸುತ್ತೇನೆ. ಹೃದಯ ವೇಗವಾಗಿ ಬಡಿದುಕೊಂಡರೆ ನಾನು ಶಾಂತಚಿತ್ತತೆಯಿಂದ ಇರಲು ಪ್ರಯತ್ನಿಸುತ್ತೇನೆ.ಏಕೆಂದರೆ ಹೃದಯ ವೇಗವಾಗಿ ಬಡಿದರೆ ನನ್ನ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಿಲ್ಲವೆಂಬ ಭಾವನೆ. ಅದಾದ ಬಳಿಕ ನಾನು ಇನ್ನಿಂಗ್ಸ್ ಆರಂಭಿಸಲು ನೋಡುತ್ತೇನೆ ಎಂದು ಕೊಹ್ಲಿ ಹೇಳಿದ್ದಾರೆ.
27 ವರ್ಷದ ಸ್ಫೋಟಕ ಬ್ಯಾಟ್ಸ್‌ಮನ್ ತಾವು ಈಗಿನ ರೀತಿಯಲ್ಲಿ ಕ್ರಿಕೆಟರ್ ಆಗಲು ಫಿಟ್ನೆಸ್ ವಾಡಿಕೆ ಕೂಡ ಕಾರಣವೆಂದು ಕ್ರೆಡಿಟ್ ನೀಡಿದ್ದಾರೆ.
ನನ್ನ ದೇಹದಾರ್ಢ್ಯತೆಯಲ್ಲಿ ಭಾರೀ ಬದಲಾವಣೆಯಾಗಿದೆ. ಶ್ರೀಲಂಕಾ ಪ್ರವಾಸದ ಸಂದರ್ಭದಲ್ಲಿ ಕಳೆದ ವರ್ಷ ನಾನು ತೂಕಗಳನ್ನು ಎತ್ತಲು ಆರಂಭಿಸಿದ್ದರಿಂದ ನನ್ನ ಇಡೀ ದೇಹ ಪರಿವರ್ತನೆಯಾಯಿತು. ಶಂಕರ್ ಬಸು ಮತ್ತು ಇಡೀ ತಂಡಕ್ಕೆ ಈ ಕ್ರೆಡಿಟ್ ಸಲ್ಲುತ್ತದೆ ಎಂದು ಕೊಹ್ಲಿ ಹೇಳಿದರು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ