Select Your Language

Notifications

webdunia
webdunia
webdunia
webdunia

ಎಡವಟ್ಟು ಮಾಡಿಕೊಂಡ ಸಾನಿಯಾ ಮಿರ್ಜಾ ಪತಿ ಶೊಯೇಬ್ ಮಲಿಕ್

ಎಡವಟ್ಟು ಮಾಡಿಕೊಂಡ ಸಾನಿಯಾ ಮಿರ್ಜಾ ಪತಿ ಶೊಯೇಬ್ ಮಲಿಕ್
London , ಭಾನುವಾರ, 28 ಮೇ 2017 (08:54 IST)
ಲಂಡನ್: ಪಾಕಿಸ್ತಾನ ಕ್ರಿಕೆಟಿಗ, ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪತಿ ಶೊಯೇಬ್ ಮಲಿಕ್ ಅಭಿಮಾನಿಯೊಬ್ಬರ ಜತೆ ಮಾತನಾಡುವಾಗ ಎಡವಟ್ಟು ಮಾಡಿಕೊಂಡಿದ್ದಾರೆ.

 
ಭಾರತದ ಬೌಲರ್ ಗಳ ಪೈಕಿ ಬೆಸ್ಟ್ ಬೌಲರ್ ಯಾರು ಎಂದು ಕೇಳಿದ್ದಕ್ಕೆ ಉತ್ತರ ಹೇಳುವಾಗ ಸುಮ್ಮನೇ ವಿವಾದ ಹುಟ್ಟುಹಾಕಿದ್ದಾರೆ. ಮೊಹಮ್ಮದ್ ಶಮಿ ಭಾರತೀಯ ಬೌಲರ್ ಗಳ ಪೈಕಿ ಬೆಸ್ಟ್ ಬೌಲರ್ ಎಂದ ಶೊಯೇಬ್ ಆತ ಮುಸ್ಲಿಂ ಹುಡುಗ ಎನ್ನುವ ಕಾರಣಕ್ಕೆ ಮೆಚ್ಚಿಕೊಳ್ಳುತ್ತಿಲ್ಲ ಎಂದಿದ್ದಾರೆ.

ಶಮಿ ಬಗ್ಗೆ ಶೊಯೇಬ್ ತಪ್ಪಾಗಿ ಏನೂ ಹೇಳಿರಲಿಲ್ಲ. ಆದರೂ ಅನವಶ್ಯಕವಾಗಿ ಧರ್ಮದ ವಿಚಾರ ಮಾತನಾಡಿದ್ದಕ್ಕೆ ಟ್ವಿಟರಿಗರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶೊಯೇಬ್ ಈ ಬಾರಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಚಾಂಪಿಯನ್ಸ್ ಟ್ರೋಫಿ ಆರಂಭದಲ್ಲೇ ಭಾರತ ತಂಡಕ್ಕೆ ಶಾಕ್