Webdunia - Bharat's app for daily news and videos

Install App

''ಅಜರ್'' ಚಿತ್ರ ಸಂಗೀತಾ ಬಿಜಲಾನಿಯನ್ನು ಮನೆಮುರುಕಿಯಾಗಿ ತೋರಿಸಿದೆಯಾ?

Webdunia
ಮಂಗಳವಾರ, 10 ಮೇ 2016 (13:51 IST)
ಗತಕಾಲದ ನಟಿ ಸಂಗೀತಾ ಬಿಜಲಾನಿ ಇಮ್ರಾನ್ ಹಶ್ಮಿ ಅವರ ಮುಂಬರುವ ''ಅಜರ್'' ಚಿತ್ರ ನಿರ್ಮಾಪಕರ ಕೇಸು ಜಡಿಯಲು ಸಿದ್ಧತೆ ನಡೆಸಿದ್ದಾರೆಂಬ ವರದಿಗಳು ಹರಿದಾಡುತ್ತಿವೆ. ಈ ಚಿತ್ರವು ಭಾರತದ ವಿವಾದಾತ್ಮಕ ನಾಯಕ ಮೊಹಮ್ಮದ್ ಅಜರುದ್ದೀನ್ ಅವರ ಜೀವನವನ್ನು ಆಧರಿಸಿದೆ. ಅಜರ್ 8 ವರ್ಷಗಳ ಹಿಂದೆ ಪತ್ನಿಗೆ ವಿಚ್ಛೇದನ ನೀಡಿ ಸಂಗೀತಾರನ್ನು ಮದುವೆಯಾಗಿದ್ದರು.

ಈಗ ಅಜರ್ ಆತ್ಮಕಥೆಯ ಚಿತ್ರ ಬಿಡುಗಡೆಗೆ ಹತ್ತಿರವಾಗುತ್ತಿದ್ದಂತೆ, ಈ ಚಿತ್ರವು ತನ್ನನ್ನು ಕೆಟ್ಟದಾಗಿ ಚಿತ್ರಿಸಿದ್ದು, ಮನೆಮುರುಕಿಯಾಗಿ ತೋರಿಸಿರಬಹುದು ಎಂಬ ಚಿಂತೆ ಸಂಗೀತಾಳನ್ನು ಆವರಿಸಿದೆ.
 
ಇದನ್ನು ತುಂಬಾ ತಲೆಗೆ ಹಚ್ಚಿಕೊಂಡಿರುವ ಸಂಗೀತಾ ಅಜರ್ ಜತೆ ಸಂಬಂಧ ಕಡಿದುಕೊಂಡು ಐದು ವರ್ಷಗಳ ಬಳಿಕ ಖಾಸಗಿ ಫೋನ್ ಕರೆಯೊಂದನ್ನು ಮಾಡಿ ತನಗುಂಟಾಗಿರುವ ಅನುಮಾನವನ್ನು ಬಾಯಿಬಿಟ್ಟಿದ್ದಾರೆ. ತಾನು ಅಜರ್ ಚಿತ್ರ ಬಿಡುಗಡೆಗೆ ಮುಂಚೆಯೇ ನೋಡಬೇಕೆಂದು ಹಠ ಹಿಡಿದು ಕೂತಿದ್ದು, ಮಾಜಿ ಕ್ರಿಕೆಟರ್ ಜತೆ ಸತತ ಟಚ್‌ನಲ್ಲಿದ್ದಾರೆ.
ಆದರೆ ಬಿಡುಗಡೆಯಾಗುವ ತನಕ ಅಜರ್ ಚಿತ್ರದ ಗುಟ್ಟು ರಟ್ಟು ಮಾಡಲು ನಿರ್ಮಾಪಕರು ತಯಾರಿಲ್ಲ. ಇಮ್ರಾನ್ ಹಶ್ಮಿ, ನರ್ಗೀಸ್ ಫಕ್ರಿ ಮತ್ತು ಪ್ರಚಿ ದೇಸಾಯಿ ಪಾತ್ರವರ್ಗದ ಅಜರ್ ಚಿತ್ರ ಬೆಳ್ಳಿತೆರೆಗೆ ಮೇ 13ರಂದು ಲಗ್ಗೆ ಹಾಕಲಿದೆ. 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

England-India Test: ರನ್‌ ಹೊಳೆ ಹರಿಸಿದ ಶುಭಮನ್‌ ಗಿಲ್‌ನನ್ನು ಮುಕ್ತ ಕಂಠದಿಂದ ಕೊಂಡಾಡಿದ ವಿರಾಟ್‌ ಕೊಹ್ಲಿ

ಇಂಗ್ಲೆಂಡ್ ವಿರುದ್ಧ ಮಿಂಚಿನ ಶತಕ ಸಿಡಿಸಿ ಅಬ್ಬರಿಸಿದ ವೈಭವ್‌ ಸೂರ್ಯವಂಶಿ: ಹಲವು ದಾಖಲೆಗಳು ಉಡೀಸ್‌

ಎನ್‌ಸಿ ಕ್ಲಾಸಿಕ್‌ನಲ್ಲಿ ಚಿನ್ನಕ್ಕೆ ಗುರಿಯಿಟ್ಟ ಚೋಪ್ರಾ: ಜಾವೆಲಿನ್‌ ಹಬ್ಬದಲ್ಲಿ ಮಿಂದೆದ್ದ ಸಿಲಿಕಾನ್‌ ಸಿಟಿ ಮಂದಿ

IND vs ENG: ಅಪರೂಪದ ದಾಖಲೆ ಮಾಡಿದ ಶುಭಮನ್ ಗಿಲ್

ಆಂಗ್ಲರ ನಾಡಲ್ಲಿ ಮತ್ತೇ ಅಬ್ಬರಿಸಿದ ಶುಭ್ಮನ್‌ ಗಿಲ್ ಬ್ಯಾಟಿಂಗ್‌: 8ನೇ ಶತಕ ಸಿಡಿಸಿದ ಕ್ಯಾಪ್ಟನ್‌

ಮುಂದಿನ ಸುದ್ದಿ
Show comments