Select Your Language

Notifications

webdunia
webdunia
webdunia
webdunia

ರೋಹ್ಟಕ್ ವಿಶ್ವವಿದ್ಯಾನಿಲಯದ ಕುಸ್ತಿ ನಿರ್ದೇಶಕಿಯಾದ ಸಾಕ್ಷಿ ಮಲಿಕ್

ರೋಹ್ಟಕ್ ವಿಶ್ವವಿದ್ಯಾನಿಲಯದ ಕುಸ್ತಿ ನಿರ್ದೇಶಕಿಯಾದ ಸಾಕ್ಷಿ ಮಲಿಕ್
ರೋಹ್ಟಾಕ್ , ಬುಧವಾರ, 7 ಸೆಪ್ಟಂಬರ್ 2016 (15:58 IST)
ರಿಯೋ ಒಲಂಪಿಕ್ಸ್‌ನಲ್ಲಿ ದೇಶಕ್ಕೆ ಮೊದಲ ಪದಕ ತಂದುಕೊಟ್ಟ ಸಾಕ್ಷಿ ಮಲಿಕ್ ಅವರನ್ನು ಹರಿಯಾಣ ಸರ್ಕಾರ ರೋಹ್ಟಕ್ ವಿಶ್ವವಿದ್ಯಾನಿಲಯದ ಕುಸ್ತಿ ನಿರ್ದೇಶಕಿಯಾಗಿ ನೇಮಿಸಿದೆ. 

ಸಾಕ್ಷಿ ಅವರನ್ನು ಮಹರ್ಷಿ ದಯಾನಂದ ವಿಶ್ವವಿದ್ಯಾಲಯದ ಕುಸ್ತಿ ನಿರ್ದೇಶಕಿಯಾಗಿ ನೇಮಿಸಲಾಗುವುದು ಎಂದು ಘೋಷಿಸಿದ ರಾಜ್ಯ ಕ್ರೀಡೆ ಮತ್ತು ಯುವಜನ ವ್ಯವಹಾರಗಳ ಸಚಿವ ಅನಿಲ್ ವಿಜ್, ಅದಷ್ಟೇ ಅಲ್ಲದೇ ತಮ್ಮ ವಿವೇಚನಾ ನಿಧಿಯಿಂದ ಸಾಕ್ಷಿ ಅವರಿಗೆ 21 ಲಕ್ಷ ಮತ್ತು 500 ಚದುರ ಯಾರ್ಡ್ಸ್ ಅಳತೆಯ ನಿವೇಶನವನ್ನು ನೀಡುವುದಾಗಿ ಸಹ ಹೇಳಿದ್ದಾರೆ. 
 
ಅವರ ಕೋಚ್ ಮನ್ದೀಪ್ ಅವರಿಗೂ ಸಹ ವಿಶೇಷ ನಿಯಮಗಳ ಅಡಿಯಲ್ಲಿ ಬಡ್ತಿಯನ್ನು ನೀಡಲಾಗುವುದು ಎಂದು ಸಹ ಅವರು ತಿಳಿಸಿದ್ದಾರೆ. 
 
ಸಾಕ್ಷಿ ಸಾಧನೆಗೆ ಬಹುಮಾನವಾಗಿ ಹರಿಯಾಣ ಸರ್ಕಾರ ಕ್ರೀಡಾ ನೀತಿ ಅಡಿಯಲ್ಲಿ ಈಗಾಗಲೇ 2.5ಕೋಟಿ ರೂಪಾಯಿಯನ್ನು ನೀಡಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ರೋಹಿತ್ ಶರ್ಮಾಗೆ ಗೇಲ್ ಹಾಕಿದ ಸವಾಲೇನು ಗೊತ್ತಾ?