Select Your Language

Notifications

webdunia
webdunia
webdunia
webdunia

ಯುವರಾಜ್ ಸಿಂಗ್ ಜತೆ ಬೆಟ್ಟಿಂಗ್ ನಲ್ಲಿ ಸಿಲುಕಿಕೊಂಡ ಸಚಿನ್ ತೆಂಡುಲ್ಕರ್!

ಯುವರಾಜ್ ಸಿಂಗ್ ಜತೆ ಬೆಟ್ಟಿಂಗ್ ನಲ್ಲಿ ಸಿಲುಕಿಕೊಂಡ ಸಚಿನ್ ತೆಂಡುಲ್ಕರ್!
Mumbai , ಬುಧವಾರ, 1 ಫೆಬ್ರವರಿ 2017 (10:05 IST)
ಮುಂಬೈ: ಕ್ರಿಕೆಟ್ ನಲ್ಲಿ ಬೆಟ್ಟಿಂಗ್ ಅಪರಾಧ. ಹಾಗಿದ್ದರೆ ಕ್ರಿಕೆಟ್ ನ ಜಂಟಲ್ ಮೆನ್ ಗಳೆಂದು ಕರೆಸಿಕೊಂಡಿರುವ ಸಚಿನ್ ತೆಂಡುಲ್ಕರ್ ಮತ್ತು ಯುವರಾಜ್ ಸಿಂಗ್ ಬೆಟ್ಟಿಂಗ್ ಮಾಡಿಕೊಂಡಿದ್ದನ್ನು ನಂಬಬಹುದೇ ಎಂದು ನಿಮಗನಿಸಬಹುದು.

 
ಆದರೆ ಅವರಿಬ್ಬರು ಬೆಟ್ಟಿಂಗ್ ಮಾಡಿದ್ದು ನಿಜ. ಆದರೆ ಕ್ರಿಕೆಟ್ ಬೆಟ್ಟಿಂಗ್ ಅಲ್ಲ. ಯಾವುದೇ ಪಂದ್ಯದ ಮೇಲಲ್ಲ. ಬದಲಾಗಿ ಟೆನಿಸ್ ಕ್ರೀಡೆಯಲ್ಲಿ ಆಂಡಿ ರಾಡಿಕ್ ಶ್ರೇಷ್ಠವಾ? ರೋಜರ್ ಫೆಡರರ್ ಶ್ರೇಷ್ಠರಾ ಎಂಬ ಬಗ್ಗೆ. ಹಿಂದೊಮ್ಮೆ ಸಚಿನ್ ಜತೆ ಯುವಿ ಹೀಗೊಂದು ಚಾಲೆಂಜ್ ಮಾಡಿದ್ದರಂತೆ. ಫೆಡರರ್ ಗಿಂತ ರಾಡಿಕ್ ಶ್ರೇಷ್ಠ ಎಂದು ಯವಿ ಹೇಳಿದ್ದರಂತೆ.

ಅದಕ್ಕೆ ಸಚಿನ್ ಫೆಡರರ್ ಶ್ರೇಷ್ಟ ಎಂದು ತಮ್ಮ ನೆಚ್ಚಿನ ತಾರೆಯ ಪರ ಬ್ಯಾಟಿಂಗ್ ಮಾಡಿದ್ದಾರೆ. ಇಬ್ಬರ ನಡುವೆ ಚರ್ಚೆಯಾಗಿ ಕೊನೆಗೆ ಇಬ್ಬರ ವೃತ್ತಿ ಜೀವನದ ಅಂತ್ಯದಲ್ಲಿ ಯಾರು ಸರಿ ಎಂದು ತೀರ್ಮಾನಿಸೋಣ ಎಂದು ಒಪ್ಪಂದಕ್ಕೆ ಬಂದರಂತೆ. ಅದರಂತೆ ಇದೀಗ ರೋಜರ್ ಫೆಡರರ್ ಈ ವಯಸ್ಸಿನಲ್ಲೂ ಆಸ್ಟ್ರೇಲಿಯಾ ಓಪನ್ ಗೆದ್ದು ಇತಿಹಾಸ ಬರೆದಿದ್ದಾರೆ. ಹಾಗಾಗಿ ಯುವಿಯನ್ನು ಎದುರು ನೋಡುತ್ತಿರುವುದಾಗಿ ಸ್ವತಃ ಸಚಿನ್ ಹೇಳಿಕೊಂಡಿದ್ದಾರೆ. ಇಂಗ್ಲೆಂಡ್ ಸರಣಿ ಮುಗಿದ ಮೇಲಾದರೂ ಯುವಿ ಸಿಕ್ತಾರಾ? ನೋಡೋಣ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಾಂಗ್ಲಾದೇಶ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ವಿಕೆಟ್ ಕೀಪರ್ ಗಳೊಳಗೇ ಪೈಪೋಟಿ!