Select Your Language

Notifications

webdunia
webdunia
webdunia
webdunia

ಕಾಮಿಕ್ ಲೆಜೆಂಡ್ ಚಾರ್ಲಿ ಚಾಪ್ಲಿನ್‌ಗೆ ಗೌರವ ಸಲ್ಲಿಸಿದ ಸಚಿನ್ ತೆಂಡೂಲ್ಕರ್

ಕಾಮಿಕ್ ಲೆಜೆಂಡ್ ಚಾರ್ಲಿ ಚಾಪ್ಲಿನ್‌ಗೆ ಗೌರವ ಸಲ್ಲಿಸಿದ ಸಚಿನ್ ತೆಂಡೂಲ್ಕರ್
ನವದೆಹಲಿ: , ಶುಕ್ರವಾರ, 17 ಜೂನ್ 2016 (17:58 IST)
ಭಾರತದ ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಕ್ರಿಕೆಟ್‌ನಿಂದ ನಿವೃತ್ತಿ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಸಚಿನ್ ರಾಜ್ಯಸಭೆ ಸದಸ್ಯರಾಗಿದ್ದು,  ಹಳ್ಳಿಯ ಶಾಲೆಯೊಂದರ ಅಭಿವೃದ್ಧಿಗೆ ತಮ್ಮ ಸಂಸದರ ನಿಧಿಯಿಂದ ಧನಸಹಾಯ ಮಾಡುವ ಮೂಲಕ  ಇತ್ತೀಚೆಗೆ ಸುದ್ದಿಯಾಗಿದ್ದರು.
 
ಮಾಸ್ಟರ್ ಬ್ಲಾಸ್ಟರ್ ಬುಧವಾರ ಮೈಕ್ರೊ ಬ್ಲಾಗಿಂಗ್ ತಾಣ ಟ್ವಿಟರ್‌ನಲ್ಲಿ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ.  ಲೆಜೆಂಡರಿ ಹಾಸ್ಯಗಾರ ಮತ್ತು ನಟ ಚಾರ್ಲಿ ಚಾಪ್ಲಿನ್ ಪ್ರತಿಮೆಯ ಪಕ್ಕದಲ್ಲಿ ಸಚಿನ್ ನಿಂತಿರುವ ಚಿತ್ರವನ್ನು ಅವರು ಪೋಸ್ಟ್ ಮಾಡಿದ್ದಾರೆ. ಲಂಡನ್ ಲೈಸೆಸ್ಟರ್ ಚೌಕದಲ್ಲಿ ಚಾರ್ಲಿ ಚಾಪ್ಲಿನ್ ಪ್ರತಿಮೆಯಿದೆ.
 
 ಚಿತ್ರವನ್ನು ಪೋಸ್ಟ್ ಮಾಡಿದ್ದಲ್ಲದೇ ತೆಂಡೂಲ್ಕರ್ ವಿದೂಷಕ ಚಾರ್ಲಿ ಚಾಪ್ಲಿನ್ ಕುರಿತು ಮೆಚ್ಚುಗೆಯನ್ನು ಹರಿಸಿ, ನಮಗೆ ನಗು ಉಕ್ಕಿಸುವಲ್ಲಿ ಎಂದಿಗೂ ವಿಫಲರಾಗಿರದ ವ್ಯಕ್ತಿ, ಶ್ರೇಷ್ಟ ನಟ, ಹಾಸ್ಯಗಾರ ಮತ್ತು ನಿರ್ದೇಶಕ -ಚಾರ್ಲಿ ಚಾಪ್ಲಿನ್ ಎಂದು ಬರೆದಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಕುಟುಂಬದೊಂದಿಗೆ ರಜಾ ಮಜಾ ಅನುಭವಿಸಿದ ಶಿಖರ್ ಧವನ್