ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಜೀವನಾಧಾರಿತ ಸಿನಿಮಾ ಸಚಿನ್: ಎ ಬಿಲಿಯನ್ ಡ್ರೀಮ್ಸ್ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಸ್ವತಃ ತಾವೇ ನಟಿಸಿದ್ದಕ್ಕೆ ಸಚಿನ್ ಭಾರೀ ಸಂಭಾವನೆ ಪಡೆದರೇ?!
ಸಚಿನ್ ತಮ್ಮದೇ ಚಿತ್ರಕ್ಕಾಗಿ 30-45 ಕೋಟಿ ಸಂಭಾವನೆ ಪಡೆದಿದ್ದರು ಎಂದು ಗಾಸಿಪ್ ಹರಡಿತ್ತು. ಆದರೆ ಆಂಗ್ಲ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ ಸಿನಿಮಾದ ವಕ್ತಾರರು ಇದೆಲ್ಲಾ ಸುಳ್ಳು ಎಂದಿದ್ದಾರೆ.
‘ಸಚಿನ್ ಸಂಭಾವನೆ ಬಗ್ಗೆ ಬರುತ್ತಿರುವ ವರದಿಗಳೆಲ್ಲಾ ಸುಳ್ಳು. ಅವರು ಈ ಸಿನಿಮಾವನ್ನು ಮಾಡಲು ಎಲ್ಲಾ ರೀತಿಯ ಸಹಕಾರ ನೀಡಿದ್ದರು. ಅದರಿಂದಾಗಿಯೇ ಈ ಚಿತ್ರ ಇಂದು ವ್ಯವಹಾರಿಕವಾಗಿ ಭಾರೀ ಲಾಭ ಮಾಡಿದೆ’ ಎಂದಿದ್ದಾರೆ.
ಹಿಂದೆ ಧೋನಿ ಬಗ್ಗೆಯೂ ಇಂತಹದ್ದೇ ಸುದ್ದಿ ಹಬ್ಬಿತ್ತು. ಧೋನಿ ತಮ್ಮ ಎಂಸ್ ಧೋನಿ ಅನ್ ಟೋಲ್ಡ್ ಸ್ಟೋರಿಗೆ 60 ರಿಂದ 70 ಕೋಟಿ ಸಂಭಾವನೆ ಪಡೆದಿದ್ದರು ಎಂದು ಸುದ್ದಿ ಬಂದಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ