Publish Date: Sun, 15 Jan 2017 (11:17 IST)
Updated Date: Sun, 15 Jan 2017 (11:23 IST)
ಇಂಧೋರ್: ಗುಜರಾತ್ ಕ್ರಿಕೆಟ್ ತಂಡ ರಣಜಿ ಟ್ರೋಫಿ ಫೈನಲ್ ನಲ್ಲಿ ಗೆದ್ದ ಖುಷಿಯಲ್ಲಿದ್ದರೆ, ಅತ್ತ ಅದೇ ತಂಡದ ಆಟಗಾರರೊಬ್ಬರ ದುರ್ವರ್ತನೆಯ ವಿಡಿಯೋ ವೈರಲ್ ಆಗಿದೆ. ಅದೂ ರಣಜಿ ಫೈನಲ್ ನಡೆದ ಮೈದಾನದಲ್ಲಿಯೇ..
ಅದು ಬೇರಾರೂ ಅಲ್ಲ. ಟೀಂ ಇಂಡಿಯಾದ ಆಟಗಾರನಾಗಿದ್ದ ಗುಜರಾತ್ ತಂಡದ ಪ್ರಮುಖ ವೇಗಿ ಆರ್ ಪಿ ಸಿಂಗ್. ಬೌಂಡರಿ ಗೆರೆ ಬಳಿ ನಿಂತಿದ್ದ ಅವರು ಅಭಿಮಾನಿಯೊಬ್ಬನ ಕೈಯಿಂದ ಮೊಬೈಲ್ ಕಿತ್ತುಕೊಂಡು ಮೈದಾನತ್ತ ಕುಕ್ಕಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇಡೀ ತಂಡದ ಬಗ್ಗೆ ಹಾಗೂ ಆರ್ ಪಿ ಸಿಂಗ್ ಬೌಲಿಂಗ್ ಬಗ್ಗೆ ಒಂದೆಡೆ ಪ್ರಶಂಸೆ ವ್ಯಕ್ತವಾಗುತ್ತಿದ್ದರೆ, ಇನ್ನೊಂದೆಡೆ ಅವರ ಈ ರೀತಿಯ ವರ್ತನೆ ಬಗ್ಗೆ ಚರ್ಚೆಗಳಾಗುತ್ತಿವೆ. ಆದರೆ ಯಾಕಾಗಿ ಅವರು ಈ ರೀತಿ ಮಾಡಿದ್ದಾರೆ ಎನ್ನುವುದು ಇನ್ನೂ ತಿಳಿದುಬಂದಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ