Webdunia - Bharat's app for daily news and videos

Install App

ಚೇತೇಶ್ವರ ಪೂಜಾರ ಮೇಲೆ ಹರಿಹಾಯ್ದು ಟ್ರೋಲ್ ಗೊಳಗಾದ ರೋಹಿತ್ ಶರ್ಮಾ

Webdunia
ಭಾನುವಾರ, 6 ಅಕ್ಟೋಬರ್ 2019 (05:44 IST)
ವಿಶಾಖಪಟ್ಟಣ: ಸಾಮಾನ್ಯವಾಗಿ ಟೀಂ ಇಂಡಿಯಾದಲ್ಲಿ ಮೈದಾನದಲ್ಲೇ ಕೂಗಾಡುವ ಸ್ವಭಾವವಿರುವ ಕ್ರಿಕೆಟಿಗ ಎಂದರೆ ವಿರಾಟ್ ಕೊಹ್ಲಿಯದ್ದು. ಆದರೆ ಈ ಬಾರಿ ರೋಹಿತ್ ಶರ್ಮಾ ಸಹ ಆಟಗಾರನ ಮೇಲೆ ಕೂಗಾಡಿ ಟ್ರೋಲ್ ಗೊಳಗಾಗಿದ್ದಾರೆ.


ದ.ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಟೀಂ ಇಂಡಿಯಾ ದ್ವಿತೀಯ ಇನಿಂಗ್ಸ್ ನಲ್ಲಿ ವೇಗವಾಗಿ ರನ್ ಕಲೆ ಹಾಕಲು ಒತ್ತು ನೀಡಿತ್ತು. ಈ ನಡುವೆ ರೋಹಿತ್ ಶರ್ಮಾ ಮತ್ತು ಚೇತೇಶ್ವರ ಪೂಜಾರ ಬ್ಯಾಟಿಂಗ್ ಮಾಡುತ್ತಿದ್ದರು.

ಹೇಳಿ ಕೇಳಿ ರೋಹಿತ್ ಪಕ್ಕಾ ಏಕದಿನ ಶೈಲಿಯಲ್ಲಿ ಬ್ಯಾಟ್ ಬೀಸುವ ಆಟಗಾರನಾದರೆ ಪೂಜಾರಾ ತೀರಾ ಟೆಸ್ಟ್ ಶೈಲಿಯಲ್ಲೇ ನಿಧಾನಗತಿಯಲ್ಲಿ ಬ್ಯಾಟ್ ಮಾಡುತ್ತಾರೆ. ಈ ನಡುವೆ ಸಿಂಗಲ್ಸ್ ತೆಗೆಯುವ ಅವಕಾಶವಿದ್ದರೂ ಓಡದ ಪೂಜಾರ ಮೇಲೆ ಸಿಟ್ಟಿಗೆದ್ದ ರೋಹಿತ್ ‘ಪೂಜಿ ಓಡು’ ಎಂದು ಕೂಗಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೊಳಗಾಗಿದ್ದಾರೆ. ಟ್ವಿಟರಿಗರು ನಾನಾ ಮೆಮೆಗಳ ಮೂಲಕ ಅಂತೂ ರೋಹಿತ್, ವಿರಾಟ್ ರ ಸ್ನೇಹಿತರಾದರು ಎಂದಿದ್ದಾರೆ. ಇಂಗ್ಲೆಂಡ್ ಕ್ರಿಕೆಟಿಗ ಬೆನ್ ಸ್ಟೋಕ್ಸ್ ಕೂಡಾ ಈ ಘಟನೆಯನ್ನು ತಮಾಷೆ ಮಾಡಿದ್ದು, ‘ನೋಡಿ ಈ ಬಾರಿ ಕೂಗಾಡಿದ್ದು ರೋಹಿತ್, ವಿರಾಟ್ ಅಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಜೂನ್ 14 ಆರ್ ಸಿಬಿ ಪಾಲಿಗೆ ಮಹತ್ವದ ದಿನ: ಅಭಿಮಾನಿಗಳ ಆತಂಕ ನಿಜ ಮಾಡುತ್ತಾ ಬಿಸಿಸಿಐ

KL Rahul: ಇಂಗ್ಲೆಂಡ್ ನಲ್ಲಿ ಕೆಎಲ್ ರಾಹುಲ್ ಗೆ ಜೀವದ ಗೆಳೆಯನಿಂದಲೇ ಕುತ್ತು

WTC Final: ರಬಾಡ ದಾಳಿಗೆ ತತ್ತರಿಸಿದ ಕಾಂಗರೂ ಪಡೆ: ದಕ್ಷಿಣ ಆಫ್ರಿಕಾ ತಂಡವೂ ಆರಂಭದಲ್ಲೇ ಕುಸಿತ

WTC Final: ಆಸ್ಟ್ರೇಲಿಯಾ, ಆಫ್ರಿಕಾ ನಡುವೆ ಫೈನಲ್, ಟೀಂ ಇಂಡಿಯಾಗೂ ಸಿಗಲಿದೆ ದುಡ್ಡು

RCB: ಆರ್ ಸಿಬಿ ತಂಡ ಮಾರಾಟಕ್ಕಿದೆ: ಕೊಳ್ಳಲು ದೊಡ್ಡ ಕುಳವೇ ಆಗಿರ್ಬೇಕು ಬಿಡಿ

ಮುಂದಿನ ಸುದ್ದಿ
Show comments