Publish Date: Mon, 03 Feb 2020 (10:33 IST)
Updated Date: Mon, 03 Feb 2020 (10:34 IST)
ಬೇ ಓವಲ್: ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಗಾಯಗೊಂಡಿದ್ದ ರೋಹಿತ್ ಶರ್ಮಾ ಇದೀಗ ಏಕದಿನ ಸರಣಿಯಲ್ಲೂ ಅನುಮಾನ ಎಂಬಂತಾಗಿದೆ.
ಅಂತಿಮ ಟಿ20 ಪಂದ್ಯದಲ್ಲಿ ಬ್ಯಾಟಿಂಗ್ ವೇಳೆ ತೀವ್ರ ಸ್ನಾಯು ಸೆಳೆತಕ್ಕೊಳಗಾಗಿದ್ದ ರೋಹಿತ್ ಶರ್ಮಾ ಅರ್ಧಕ್ಕೇ ಪೆವಿಲಿಯನ್ ಗೆ ಮರಳಿದ್ದರು. ಇದೀಗ ಗಾಯ ಚೇತರಿಸಿಕೊಳ್ಳದೇ ಇದ್ದರೆ ಏಕದಿನ ಸರಣಿಗೂ ಅನುಮಾನ ಎಂಬಂತಾಗಿದೆ.
ಬುಧವಾರದಿಂದ ಮೂರು ಏಕದಿನ ಪಂದ್ಯಗಳ ಸರಣಿ ಆರಂಭವಾಗಲಿದೆ. ಶಿಖರ್ ಧವನ್ ಕೂಡಾ ಅಲಭ್ಯರಾಗಿರುವುದರಿಂದ ಕೆಎಲ್ ರಾಹುಲ್ ಮೇಲೆ ಹೆಚ್ಚಿನ ಹೊರೆ ಬೀಳಲಿದೆ.