Publish Date: Sun, 03 Mar 2019 (09:32 IST)
Updated Date: Sun, 03 Mar 2019 (09:33 IST)
ಹೈದರಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಸುತ್ತಿರುವ ಮೊದಲ ಏಕದಿನ ಪಂದ್ಯದ ವೇಳೆ ರೋಹಿತ್ ಶರ್ಮಾ ಧೋನಿ ಕಾಲಿಗೆ ಬಿದ್ದ ಘಟನೆ ನಡೆದಿದೆ!
ಆದರೆ ಕಾಲಿಗೆ ಬಿದ್ದಿದ್ದು ಆಶೀರ್ವಾದ ಪಡೆಯಲು ಅಲ್ಲ ಬಿಡಿ. ಭಾರತ ಫೀಲ್ಡಿಂಗ್ ಮಾಡುತ್ತಿದ್ದಾಗ ವಿಕೆಟ್ ಕೀಪರ್ ಧೋನಿ ಶೂ ಲೇಸ್ ಲೂಸ್ ಆಗಿತ್ತು. ಈ ಸಂದರ್ಭದಲ್ಲಿ ಧೋನಿ ರೋಹಿತ್ ಸಹಾಯ ಪಡೆದಿದ್ದರಷ್ಟೇ.
ರೋಹಿತ್ ಶರ್ಮಾ ಕುಳಿತು ಧೋನಿ ಶೂ ಲೇಸ್ ಕಟ್ಟುತ್ತಿರುವ ಫೋಟೋಗಳು ವೈರಲ್ ಆಗಿವೆ. ಅಲ್ಲದೆ, ಧೋನಿ ಅಭಿಮಾನಿಗಳು ಇದನ್ನೇ ಹಿಟ್ ಮ್ಯಾನ್ ಮತ್ತು ಧೋನಿ ನಡುವಿನ ಬಾಂಧವ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.