ಇಂದಿನಿಂದ ಗ್ರೇಟರ್ ನೊಯ್ಡಾದಲ್ಲಿ ದುಲೀಪ್ ಟ್ರೋಫಿ ಫೈನಲ್ ಪಂದ್ಯ ನಡೆಯುತ್ತಿದ್ದು ರಾಷ್ಟ್ರೀಯ ತಂಡದ ಆಟಗಾರರಾದ ರೋಹಿತ್ ಶರ್ಮಾ, ಶಿಖರ್ ಧವನ್ ಮತ್ತು ರವೀಂದ್ರ ಜಡೇಜಾ ಕೂಡ ಕಣಕ್ಕಿಳಿಯಲಿದ್ದಾರೆ. ಶಿಖರ್ ಧನ್ ಇಂಡಿಯಾ ರೆಡ್ ತಂಡದಲ್ಲಿದ್ದರೆ, ಶರ್ಮಾ ಮತ್ತು ರವೀಂದ್ರ ಜಡೇಜಾ ಇಂಡಿಯಾ ಬ್ಲ್ಯೂ ತಂಡಕ್ಕಾಗಿ ಆಡಲಿದ್ದಾರೆ.
ಕಳೆದ ಒಂದು ವರ್ಷದಿಂದ ಈ ಮೂವರ ಪ್ರದರ್ಶನ ಅತ್ಯಂತ ಪೇಲವವಾಗಿದ್ದು ತಮ್ಮ ಸಾಮರ್ಥ್ಯ ಸಾಬೀತು ಪಡಿಸಲು ಬಿಸಿಸಿಐ ಆ ಅವಕಾಶವನ್ನು ಒದಗಿಸಿದೆ. ಇಂದು ಉತ್ತಮ ಪ್ರದರ್ಶನ ನೀಡಿದರೆ ಮಾತ್ರ ಈ ಮೂವರು ಈ ತಿಂಗಳಾಂತ್ಯದಿಂದ ನಡೆಯಲಿರುವ ಕಿವೀಸ್ ವಿರುದ್ಧದ ಸರಣಿಯಲ್ಲಿ ಚಾನ್ಸ್ ಪಡೆಯಲಿದ್ದಾರೆ. ಹೀಗಾಗಿ ದುಲೀಪ್ ಟ್ರೋಫಿ ಫೈನಲ್ ಈ ಜಡ್ಡು, ಶರ್ಮಾ ಮತ್ತು ಧನ್ ಪಾಲಿಗೆ ಅಗ್ನಿ ಪರೀಕ್ಷೆಯಾಗಿ ಪರಿಣಣಿಸಿದೆ. ಇಂದಿನ ಪಂದ್ಯದಲ್ಲಿ ಆಯ್ಕೆಗಾರರು ಮೂವರ ಮೇಲೆ ತಮ್ಮ ಚಿತ್ತವನ್ನು ನೆಟ್ಟಿದ್ದಾರೆ.
ಕಳೆದೊಂದು ವರ್ಷದಲ್ಲಿ ರೋಹಿತ್4 ಟೆಸ್ಟ್ ಪಂದ್ಯಗಳಲ್ಲಿ ದಾಖಲಿಸಿದ್ದು ಕೇವಲ 76 ರನ್. ಅದರಲ್ಲಿ ಒಂದೇ ಒಂದು ಅರ್ಧ ಶತಕ ಕೂಡ ಇಲ್ಲ. ಧವನ್ 07 ಪಂದ್ಯಗಳನ್ನಾಡಿದ್ದು 288 ರನ್ ಗಳಿಸಿದ್ದಾರೆ. ಬ್ಯಾಟಿಂಗ್ ಸರಾಸರಿ 28.8. ಅದರಲ್ಲಿ ಒಂದು ಶತಕ ಮತ್ತು ಒಂದು ಅರ್ಧ ಶತಕವಿದೆ. ಆಲ್ ರೌಂಡರ್ ಜಡೇಜಾ 5 ಪಂದ್ಯಗಳಲ್ಲಿ 131 ರನ್ ಮತ್ತು 26 ವಿಕೆಟ್ ವಿಕೆಟ್ ಗಳಿಸಿದ್ದಾರೆ.
ಈ ದಾಖಲೆಗಳು ಫಾರ್ಮ್ ಈ ಮೂವರು ಫಾರ್ಮ್‌ನಲ್ಲಿ ಇಲ್ಲ ಎಂಬುದನ್ನು ಸಾಬೀತು ಪಡಿಸುತ್ತಿದೆ. ಹೀಗಾಗಿ ಬಿಸಿಸಿಐ ಕೊನೆಯ ಆಯ್ಕೆಯನ್ನು ಈ ಮೂವರ ಮುಂದಿಟ್ಟಿದೆ. ಇಂದಿನಿಂದ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಸಾಲಿಡ್ ಪ್ರದರ್ಶನ ನೀಡಿದರೆ ಮಾತ್ರ ಮೂವರು ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಅವಕಾಶ ಪಡೆಯಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ