Select Your Language

Notifications

webdunia
webdunia
webdunia
webdunia

ಆ ರೀತಿ ಮಾಡಿದ್ದಕ್ಕೆ ನನಗೆ ಪಶ್ಚಾತ್ತಾಪವಿಲ್ಲ: ರೋಹಿತ್ ಶರ್ಮಾ

webdunia
ಬ್ರಿಸ್ಬೇನ್ , ಶನಿವಾರ, 16 ಜನವರಿ 2021 (16:38 IST)
ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಬೇಜವಾಬ್ಧಾರಿಯುತ ಶಾಟ್ ಬಾರಿಸಲು ಹೋಗಿ ಔಟಾಗಿದ್ದಕ್ಕೆ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಕಿಡಿ ಕಾರಿದ್ದರು. ಆದರೆ ಈ ಹೊಡೆತದ ಬಗ್ಗೆ ರೋಹಿತ್ ದಿನದಾಟದ ನಂತರ ಪ್ರತಿಕ್ರಿಯಿಸಿದ್ದಾರೆ.


44  ರನ್ ಗಳಿಸಿದ್ದಾಗ ರೋಹಿತ್ ಶರ್ಮಾ ನಥನ್ ಲಿಯೋನ್ ಬೌಲಿಂಗ್ ನಲ್ಲಿ ಕ್ಯಾಚ್ ಔಟ್ ಆಗಿದ್ದರು. ರೋಹಿತ್ ರಂತಹ ಅನುಭವಿ ಆಟಗಾರ ಇಂತಹ ಸಂದರ್ಭದಲ್ಲಿ ಜವಾಬ್ಧಾರಿಯುತ ಇನಿಂಗ್ಸ್ ಆಡಬೇಕಿತ್ತು ಎಂದು ಹಲವರು ಅಭಿಪ್ರಾಯಪಟ್ಟಿದ್ದರು. ಆದರೆ ಈ ಬಗ್ಗೆ ಮಾತನಾಡಿರುವ ರೋಹಿತ್ ನನಗೆ ಆ ಹೊಡೆತ ಹೊಡೆದಿದ್ದಕ್ಕೆ ಯಾವುದೇ ಪಶ್ಚಾತ್ತಾಪವಿಲ್ಲ. ನಾನು ತಪ್ಪು ಮಾಡಿರಬಹುದು. ಇದನ್ನು ಒಪ್ಪಿಕೊಳ್ಳಲು ನನಗೆ ಬೇಸರವಿಲ್ಲ. ಆದರೆ ಲಿಯೋನ್ ಅತ್ಯುತ್ತಮ ಬೌಲರ್’ ಎಂದಿದ್ದಾರೆ ರೋಹಿತ್.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಆಸೀಸ್ ಟೆಸ್ಟ್: ಮಳೆಗೆ ಆಹುತಿಯಾಯ್ತು ಎರಡನೇ ದಿನದಾಟ