Select Your Language

Notifications

webdunia
webdunia
webdunia
webdunia

ಮುಂಬೈ ಇಂಡಿಯನ್ಸ್ ಟೀಮ್ಸ್‌ ಜತೆ ಹೋಳಿ ಆಚರಿಸಿದ ರೋಹಿತ್ ಶರ್ಮಾ: ಪೋಟೋ ವೈರಲ್

Rohith Sharma

Sampriya

ಮುಂಬೈ: , ಸೋಮವಾರ, 25 ಮಾರ್ಚ್ 2024 (17:05 IST)
Photo Courtesy X
ಮುಂಬೈ: ಟೀಂ ಇಂಡಿಯಾ ನಾಯಕ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಸೋಮವಾರ ತಮ್ಮ ಐಪಿಎಲ್ ಸಹ ಆಟಗಾರರೊಂದಿಗೆ ಹೋಳಿ ಆಚರಿಸಿ ಸಂಭ್ರಮಿಸಿದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮುಂಬೈ ಇಂಡಿಯನ್ಸ್ ಸಣ್ಣ ಕ್ಲಿಪ್‌ಅನ್ನು ಹಂಚಿಕೊಂಡಿದ್ದು ಅದರಲ್ಲಿ ರೋಹಿತ್‌ಗೆ ತನ್ನ ಮುಖಕ್ಕೆ ಬಣ್ಣ ಬಳಿದು ಪೈಪ್‌ನಿಂದ ನೀರನ್ನು ಸಿಂಪಡಿಸುತ್ತಿರುವ  ದೃಶ್ಯವಿದೆ.

"ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು! Brb, ಅಡ್ಮಿನ್ ಫೋನ್ ರಿಪೇರಿ ಮಾಡಬೇಕಾಗಿದೆ" ಎಂದು ರೋಹಿತ್ ಕ್ಯಾಮೆರಾಗೆ ನೀರು ಸಿಂಪಡಿಸುತ್ತಿರುವ ವೀಡಿಯೊದ ಶೀರ್ಷಿಕೆಯಾಡಿಯಲ್ಲಿದೆ.

ಮುಂಬೈ ಇಂಡಿಯನ್ಸ್ ತನ್ನ ಐಪಿಎಲ್ 2024 ಸೀಸನ್ ಆರಂಭಿಕ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಭಾನುವಾರ 6 ರನ್‌ಗಳಿಂದ ಸೋತಿದೆ.

ಇದೇ ವೇಳೆ ಭಾರತದ ಮಾಜಿ ಕ್ರಿಕೆಟಿಗರು ಅಭಿಮಾನಿಗಳಿಗೆ ಹೋಳಿ ಹಬ್ಬದ ಶುಭಾಶಯ ಕೋರಿದ್ದಾರೆ.
ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪೋಸ್ಟ್ ಮಾಡಿದ್ದಾರೆ, "ಈ ಸುಂದರವಾದ ಹೋಳಿ ಹಬ್ಬದಂದು ಎಲ್ಲರಿಗೂ ಸಂತೋಷ ಮತ್ತು ಬಣ್ಣಗಳನ್ನು ಹಾರೈಸುತ್ತೇನೆ. ಬನ್ನಿ, ನಾವೆಲ್ಲರೂ ಒಟ್ಟಾಗಿ ಇದನ್ನು ಸ್ಮರಣೀಯಗೊಳಿಸೋಣ. ಹೋಳಿ ಮತ್ತು ರಂಗ ಪಂಚಮಿಯ ಹೃತ್ಪೂರ್ವಕ ಅಭಿನಂದನೆಗಳು. ಎಲ್ಲರಿಗೂ ಶುಭಾಶಯಗಳು ಮತ್ತು ಹೋಳಿ ಹಬ್ಬದ ಶುಭಾಶಯಗಳು."

ಭಾರತದ ಮಾಜಿ ಕ್ರಿಕೆಟಿಗ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮೆಂಟರ್ ಗೌತಮ್ ಗಂಭೀರ್, "ಎಲ್ಲರಿಗೂ ತುಂಬಾ ಸಂತೋಷ ಮತ್ತು ವರ್ಣರಂಜಿತ ಹೋಳಿ ಶುಭಾಶಯಗಳು" ಎಂದು ಬರೆದಿದ್ದಾರೆ.

ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್, "ರಂಗ್ ಬರ್ಸೆ! ನಿಮಗೆ ಪ್ರೀತಿ, ನಗು ಮತ್ತು ಆಶೀರ್ವಾದದಿಂದ ತುಂಬಿದ ಹೋಳಿ ಶುಭಾಶಯಗಳು" ಎಂದು ಪೋಸ್ಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ಪಂಜಾಬ್ ಕಿಂಗ್ಸ್ ಎದುರು ಮೊದಲ ಗೆಲುವಿನ ಕನಸಲ್ಲಿ ಆರ್ ಸಿಬಿ