ನವದೆಹಲಿ: ಟೀಂ ಇಂಡಿಯಾ ಸೀಮಿತ್ ಓವರ್ ಗಳ ನಾಯಕ ಎಂಎಸ್ ಧೋನಿ ಜತೆ ಗೌತಮ್ ಗಂಭೀರ್ ಸಂಬಂಧ ಸರಿಯಿಲ್ಲ ಎಂದು ಬಹಳ ದಿನಗಳಿಂದಲೂ ಸುದ್ದಿ ಹಬ್ಬಿತ್ತು. ಈ ಬಗ್ಗೆ ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಸ್ವತಃ ಗಂಭೀರ್ ಉತ್ತರಿಸಿದ್ದಾರೆ.
ನಮ್ಮಿಬ್ಬರ ನಡುವೆ ಅಭಿಪ್ರಾಯ ಬೇಧಗಳಿರಬಹುದು. ಆದರೆ ಶತ್ರುತ್ವವಿಲ್ಲ. ನಾವಿಬ್ಬರೂ ದೇಶಕ್ಕಾಗಿ ಆಡುವಾಗ ತಂಡದ ಬಗ್ಗೆ ಯೋಚಿಸುತ್ತೇವೆಯೇ ಹೊರತು ನಮ್ಮಿಬ್ಬರ ನಡುವಿನ ವೈಮನಸ್ಯ ಮುಖ್ಯವಾಗುವುದಿಲ್ಲ. ನಮ್ಮ ಮಧ್ಯೆ ಅಂತಹ ಯಾವುದೇ ಶತ್ರುತ್ವವಿಲ್ಲ ಎಂದು ಫೇಸ್ ಬುಕ್ ಪೇಜ್ ನಲ್ಲಿ ಗಂಭೀರ್ ಅಭಿಮಾನಿಗೆ ಸ್ಪಷ್ಟಪಡಿಸಿದ್ದಾರೆ.
ಗಂಭೀರ್ ಟೀಂ ಇಂಡಿಯಾದ ಪ್ರಮುಖ ಬ್ಯಾಟ್ಸ್ ಮನ್ ಆಗಿದ್ದರು. ಆದರೆ ಗಂಭೀರ್ ಬಗ್ಗೆ ಆಯ್ಕೆ ಸಮಿತಿಗೆ ಚಾಡಿ ಹೇಳಿ ಅವರನ್ನು ಪರ್ಮನೆಂಟ್ ಆಗಿ ತಂಡದಿಂದ ಹೊರ ಹಾಕಲು ಧೋನಿಯೇ ಕಾರಣ ಎನ್ನಲಾಗುತ್ತಿತ್ತು. ಈ ಹಿನ್ನಲೆಯಲ್ಲಿ ಗಂಭೀರ್ ಅದನ್ನು ತಿಳಿಗೊಳಿಸುವ ಯತ್ನ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ