Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಬಿಟ್ಟು ಕೌಂಟಿ ಕಡೆಗೆ ಓಡಿದ ರವಿಚಂದ್ರನ್ ಅಶ್ವಿನ್

ರವಿಚಂದ್ರನ್ ಅಶ್ವಿನ್
ಮುಂಬೈ: ಟೀಂ ಇಂಡಿಯಾದ ಪ್ರಮುಖ ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ ಗೆ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ.


 
ಹೀಗಾಗಿ ರಾಷ್ಟ್ರೀಯ ತಂಡದಿಂದ ಬಿಡುವು ಪಡೆದು ಕೌಂಟಿ ಕ್ರಿಕೆಟ್ ಆಡುವುದರತ್ತ ಅಶ್ವಿನ್ ಚಿತ್ತ ಹರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಶ್ವಿನ್ ಇದೇ ಮೊದಲ ಬಾರಿಗೆ ಕೌಂಟಿ ಕ್ರಿಕೆಟ್ ಆಡಲಿದ್ದಾರೆ. ಅವರಿಗೆ ಇಶಾಂತ್ ಶರ್ಮಾ, ರವೀಂದ್ರ ಜಡೇಜಾ ಮತ್ತು ಚೇತೇಶ್ವರ ಪೂಜಾರ ಕೂಡಾ ಸಾಥ್ ನೀಡುವ ನಿರೀಕ್ಷೆಯಿದೆ. ಅಶ್ವಿನ್ ವಾರ್ಕ್ ಶೈರ್ ಕೌಂಟಿ ಕ್ಲಬ್ ಪರ ಆಡುವ ಸಾಧ್ಯತೆಯಿದೆ.

ಮುಂದಿನ ವರ್ಷ ಇಂಗ್ಲೆಂಡ್ ನಲ್ಲಿ ಟೆಸ್ಟ್ ಕ್ರಿಕೆಟ್ ಸರಣಿ ಆಡಲಿರುವುದರಿಂದ ಟೀಂ ಇಂಡಿಯಾದ ಈ ಪ್ರಮುಖರು ಆಂಗ್ಲರ ನೆಲದಲ್ಲಿ ಕೌಂಟಿ ಕ್ರಿಕೆಟ್ ಆಡಿ ಅನುಭವ ಗಳಿಸಲಿ ಎಂದು ಆಯ್ಕೆಗಾರರು ಆಟಗಾರರಿಗೆ ಹಸಿರು ನಿಶಾನೆ ತೋರಿದ್ದಾರೆ.

ಇದನ್ನೂ ಓದಿ.. ‘ಆ ದಿನಗಳ’ ಕೆಲವು ‘ಮಿಸ್ಟೇಕ್’ ಗಳು!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀಲಂಕಾಗೆ ವೈಟ್ ವಾಶ್ ಅವಮಾನ, ಟೀಂ ಇಂಡಿಯಾಗೆ ಐತಿಹಾಸಿಕ ಗೆಲುವು