Publish Date: Mon, 23 Nov 2020 (11:50 IST)
Updated Date: Mon, 23 Nov 2020 (11:54 IST)
ಸಿಡ್ನಿ: ಆಸ್ಟ್ರೇಲಿಯಾದಂತಹ ಮಹತ್ವದ ಟೂರ್ನಿ ನಡುವೆಯೂ ತಂದೆಯಾಗುತ್ತಿರುವ ಖುಷಿ ಅನುಭವಿಸಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಿತೃತ್ವ ರಜೆ ಪಡೆದಿರುವುದರ ಬಗ್ಗೆ ಕೋಚ್ ರವಿಶಾಸ್ತ್ರಿ ಪ್ರತಿಕ್ರಿಯೆ ನೀಡಿದ್ದಾರೆ.
ಕೊಹ್ಲಿ ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ. ಇಂತಹ ಕ್ಷಣಗಳು ಬೇಕೆಂದರೂ ಮತ್ತೆ ಬರದು. ಅವರನ್ನು ನಾವು ಮಿಸ್ ಮಾಡಿಕೊಳ್ಳಲಿದ್ದೇವೆ. ಆದರೆ ಅವರಿಗೆ ಈಗ ಹೋಗುವ ಅವಕಾಶ, ಅವರ ಖುಷಿ ಅನುಭವಿಸಲಿ ಎಂದು ರವಿಶಾಸ್ತ್ರಿ ನಾಯಕನ ಬೆಂಬಲಕ್ಕೆ ನಿಂತಿದ್ದಾರೆ.