Select Your Language

Notifications

webdunia
webdunia
webdunia
webdunia

ಮುಂದಿನ ಎರಡು ವರ್ಷಕ್ಕೆ ರಾಹುಲ್ ದ್ರಾವಿಡ್ ಭಾರತ ತಂಡದ ಕೋಚ್

ಮುಂದಿನ ಎರಡು ವರ್ಷಕ್ಕೆ ರಾಹುಲ್ ದ್ರಾವಿಡ್ ಭಾರತ ತಂಡದ ಕೋಚ್
Mumbai , ಮಂಗಳವಾರ, 20 ಜೂನ್ 2017 (11:39 IST)
ಮುಂಬೈ: ಮುಂದಿನ ಎರಡು ವರ್ಷಗಳಿಗೆ  ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಭಾರತ ತಂಡದ ಕೋಚ್ ಆಗಿ ಮುಂದುವರಿಯಲಿದ್ದಾರೆ. ಅರೇ.. ರಾಹುಲ್ ದ್ರಾವಿಡ್ ಅನಿಲ್ ಕುಂಬ್ಳೆ ಸ್ಥಾನಕ್ಕೆ ಬಂದರಾ ಎಂದು ಅಚ್ಚರಿಯಾಯಿತೇ?!

 
ಹಾಗೇನೂ ಇಲ್ಲ. ದ್ರಾವಿಡ್ ಪ್ರಸಕ್ತ ಭಾರತ ಎ ತಂಡದ ಕೋಚ್. ಅಂಡರ್ 19 ತಂಡದ ಕೋಚ್ ಆಗಿ ದ್ರಾವಿಡ್ ಗುತ್ತಿಗೆ ಅವಧಿ ಮುಗಿದಿತ್ತು. ಈ ಹಿನ್ನಲೆಯಲ್ಲಿ ದ್ರಾವಿಡ್ ಗುತ್ತಿಗೆ ಅವಧಿ ಮುಂದುವರಿಸುತ್ತಾರೋ ಇಲ್ಲವೋ ಎಂಬ ಅನುಮಾನವಿತ್ತು.

ಅದಲ್ಲದೆ, ರಾಮಚಂದ್ರ ಗುಹಾ ತಮ್ಮ ಬಿಸಿಸಿಐ ಆಡಳಿತ ಮಂಡಳಿ ಸದಸ್ಯತ್ವಕ್ಕೆ ರಾಜೀನಾಮೆ ನೀಡುವಾಗ ದ್ರಾವಿಡ್ ಐಪಿಎಲ್ ನಲ್ಲೂ ಕೋಚ್ ಆಗಿ ಲಾಭದಾಯಕ ಹುದ್ದೆಯಲ್ಲಿದ್ದಾರೆಂದು ಆರೋಪ ಮಾಡಿದ್ದರು. ಹೀಗಾಗಿ ದ್ರಾವಿಡ್ ಕೋಚ್ ಸ್ಥಾನಕ್ಕೆ ಕುತ್ತು ಬರಬಹುದೆಂದು ಅನುಮಾನಗಳಿತ್ತು.

ಆದರೆ ಇದೀಗ ಗಂಗೂಲಿ,  ಲಕ್ಷ್ಮಣ್ ಮತ್ತು ಸಚಿನ್ ನೇತೃತ್ವದ ಸಲಹಾ ಸಮಿತಿ ಯಾವುದೇ ಸಂದರ್ಶನವಿಲ್ಲದೇ ದ್ರಾವಿಡ್ ರನ್ನೇ ಮುಂದುವರಿಸುವ ನಿರ್ಧಾರ ಕೈಗೊಂಡಿದೆ. ಹೀಗಾಗಿ ಮತ್ತೆರಡು ವರ್ಷ ದ್ರಾವಿಡ್ ಯುವ ಆಟಗಾರರಿಗೆ ಸ್ಪೂರ್ತಿ ತುಂಬಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ಅಭಿಮಾನಿಯ ಮೇಲೆ ಸಿಟ್ಟಿಗೆದ್ದ ಟೀಂ ಇಂಡಿಯಾ ಬೌಲರ್ ಶಮಿ