Publish Date: Tue, 02 Jul 2019 (10:51 IST)
Updated Date: Tue, 02 Jul 2019 (10:53 IST)
ಲಂಡನ್: ವಿಶ್ವಕಪ್ 2019 ರಲ್ಲಿ ಧೋನಿ ನಿಧಾನಗತಿಯ ಬ್ಯಾಟಿಂಗ್ ಬಗ್ಗೆ ಟೀಕೆಗಳು ಕೇಳಿಬರುತ್ತಿರುವ ಬೆನ್ನಲ್ಲೇ ಮಾಜಿ ಕ್ರಿಕೆಟಿಗ, ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಕೆಎಲ್ ರಾಹುಲ್ ಆಟವನ್ನು ಪ್ರಶ್ನಿಸಿದ್ದಾರೆ.
ಧೋನಿ ನಿಧಾನಗತಿಯ ಬ್ಯಾಟಿಂಗ್ ಮಾಡುತ್ತಾರೆ ಎಂದು ಅವರ ಮೇಲೆ ಒತ್ತಡ ಹೇರುವವರು ಮೊದಲು ಕೆಎಲ್ ರಾಹುಲ್ ಮೇಲೆ ಒತ್ತಡ ಹಾಕಲಿ. ಆತ ಇನ್ನೂ ರನ್ ಗಳಿಸಬೇಕು ಎಂದು ಹೇಳಲಿ ಎಂದು ಮಂಜ್ರೇಕರ್ ಸವಾಲು ಹಾಕಿದ್ದಾರೆ.
ಧೋನಿ ಮೇಲೆ ಈ ರೀತಿ ಒತ್ತಡ ಹೇರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿರುವ ಮಂಜ್ರೇಕರ್ ರಾಹುಲ್ ಹೆಚ್ಚಿನ ಜವಾಬ್ಧಾರಿ ವಹಿಸಬೇಕು. ರಾಹುಲ್ ಉತ್ತಮ ಆರಂಭ ಪಡೆದು ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವುದನ್ನು ಕಲಿಯಬೇಕು ಎಂದಿದ್ದಾರೆ.