ರಾಂಚಿ: ಆಸ್ಟ್ರೇಲಿಯಾ ವಿರುದ್ಧ ತೃತೀಯ ಟೆಸ್ಟ್ ಪಂದ್ಯದಲ್ಲಿ ಮ್ಯಾರಥಾನ್ ಇನಿಂಗ್ಸ್ ಆಡಿ ಕಂಗೆಡಿಸಿದ ಚೇತೇಶ್ವರ ಪೂಜಾರ-ವೃದ್ಧಿಮಾನ್ ಸಹಾ ಪಂದ್ಯ ಮುಗಿದ ಮೇಲೆ ಅಕ್ಕ ಪಕ್ಕದ ಬೆಡ್ ನಲ್ಲಿದ್ದರು! ಅಲ್ಲಿ ಅವರು ಮಾಡಿದ್ದೇನು?!!
ಗಾಬರಿಯಾಗಬೇಡಿ. ಅಷ್ಟು ಹೊತ್ತು ನಿಂತು ಆಡಿದ ಮೇಲೆ ಕೊಂಚ ರಿಲ್ಯಾಕ್ಸ್ ಆಗಬೇಡವೇ? ಇಬ್ಬರಿಗೂ ಮಾಂಸಖಂಡಗಳು ಹಿಡಿದುಕೊಂಡು ಬಿಟ್ಟಿತ್ತು. ಹೀಗಾಗಿ ತಂಡದ ಫಿಸಿಯೋ ಇಬ್ಬರನ್ನೂ ಅಕ್ಕ ಪಕ್ಕದ ಬೆಡ್ ನಲ್ಲಿ ಮಲಗಿಸಿ ಚಿಕಿತ್ಸೆ ಕೊಟ್ಟರು.
ಇದನ್ನು ಬಿಸಿಸಿಐ ತನ್ನ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ್ದು, ಭಾರೀ ಸುದ್ದಿ ಮಾಡಿದೆ. ಪಂದ್ಯದಲ್ಲೂ ಜತೆಗಾರರು, ಪಂದ್ಯ ಮುಗಿದ ಮೇಲೆಯೂ ಪಾರ್ಟನರ್ ಗಳು ಎಂದು ಅಡಿ ಬರಹವನ್ನೂ ಕೊಟ್ಟಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ