Select Your Language

Notifications

webdunia
webdunia
webdunia
webdunia

ಪ್ರಣವ್ ಧನವಡೆ ಕೈಬಿಟ್ಟು ಅರ್ಜುನ್ ಸೇರ್ಪಡೆ: ವಿವಾದಕ್ಕೆ ಪ್ರತಿಕ್ರಿಸಿದ ಪ್ರಣವ್ ತಂದೆ

ಪ್ರಣವ್ ಧನವಡೆ ಕೈಬಿಟ್ಟು ಅರ್ಜುನ್  ಸೇರ್ಪಡೆ: ವಿವಾದಕ್ಕೆ ಪ್ರತಿಕ್ರಿಸಿದ ಪ್ರಣವ್ ತಂದೆ
ನವದೆಹಲಿ , ಬುಧವಾರ, 1 ಜೂನ್ 2016 (12:50 IST)
ಪ್ರತಿಭಾಶಾಲಿ ಆಟಗಾರ ಪ್ರಣವ್ ಧನವಾಡೆಯನ್ನು ಪಶ್ಚಿಮ ವಲಯ ಅಂಡರ್ 16 ತಂಡದಲ್ಲೇಕೆ ಸೇರ್ಪಡೆ ಮಾಡಿಲ್ಲ ಎಂಬ ವಿಷಯ ಕುರಿತು ಅವನ ತಂದೆ ಪ್ರಶಾಂತ್ ಧನವಾಡೆ ಬಹಿರಂಗಮಾಡಿದ್ದಾರೆ. ಪ್ರಣವ್ ಸೇರ್ಪಡೆಯಾಗಿಲ್ಲವೆಂಬ ಸುದ್ದಿ ಬಹಿರಂಗವಾದಾಗಿನಿಂದ, ಸಾಮಾಜಿಕ ಜಾಲತಾಣವು ಚಿತ್ರಗಳು ಮತ್ತು ಸಂದೇಶಗಳಿಂದ ತುಂಬಿಹೋಗಿದ್ದು, ಧನವಾಡೆಯನ್ನು ಕಡೆಗಣಿಸಿ ಅರ್ಜುನ್ ತೆಂಡೂಲ್ಕರ್ ಅವರ ಆಯ್ಕೆಯನ್ನು ಕ್ರಿಕೆಟ್ ಅಭಿಮಾನಿಗಳು ಪ್ರಶ್ನಿಸಿದ್ದರು.
 
ಪ್ರಶಾಂತ್ ಧನವಾಡೆ ಇವೆಲ್ಲಾ ವದಂತಿಗಳಿಗೆ ತೆರೆಎಳೆದು ತಮ್ಮ ಪುತ್ರನನ್ನು ತಂಡಕ್ಕೆ ಸೇರಿಸದಿರುವುದನ್ನು ಪ್ರಶ್ನಿಸಿದ  ಜನರು, ಯಾವುದೇ ಕಾರಣವಿಲ್ಲದೇ ವಿವಾದ ಉಂಟುಮಾಡುತ್ತಿದ್ದು, ಪಶ್ಚಿಮ ವಲಯದ ಯು-16 ತಂಡವನ್ನು ಎಂಸಿಎ ಯು-16 ತಂಡದಿಂದ ಆರಿಸಿದ್ದು, ಪ್ರಣವ್ ಅದರ ಭಾಗವಾಗಿರಲಿಲ್ಲ ಎಂದಿದ್ದಾರೆ. 
 
ಅರ್ಜುನ್ ತೆಂಡೂಲ್ಕರ್ ಆಲ್ ರೌಂಡರ್ ಆಗಿದ್ದು ಎಂಸಿಎ ತಂಡದ ಭಾಗವಾಗಿದ್ದರಿಂದ ಅವನು ಅರ್ಹತೆ ಪಡೆದಿದ್ದಾನೆ ಎಂದು ಅವರು ಹೇಳಿದರು. ಆಯ್ಕೆ ಟ್ರಯಲ್‌ಗಳು ನಡೆದ ನಂತರ ತಮ್ಮ ಪುತ್ರ ದಾಖಲೆಯ 1009 ರನ್ ಗಳಿಸಿದ್ದಾನೆಂದು ಪ್ರಶಾಂತ್ ಹೇಳಿದರು.
 
 ಅರ್ಜುನ್ ಮತ್ತು ಪ್ರಣವ್ ಉತ್ತಮ ಸ್ನೇಹಿತರಾಗಿದ್ದು,ಈ ವಿವಾದದಿಂದ ಅವರ ಸ್ನೇಹಕ್ಕೆ ತೊಂದರೆಯಾಗಿಲ್ಲ ಎಂದರು. ಯು-19 ಶಿಬಿರಗಳಲ್ಲಿ ಇಬ್ಬರೂ ಒಟ್ಟಿಗೆ ಆಡುತ್ತಿದ್ದು, ಅವರ ಪ್ರತಿಭೆಯಿಂದ ಪ್ರಗತಿ ಹೊಂದಿದ್ದಾರೆ. ಅರ್ಜುನ್ ಆಲ್‌ರೌಂಡರ್ ಆಗಿದ್ದರೆ ಪ್ರಣವ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿದ್ದಾನೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ದಿಢೀರ್ ಭಾರತಕ್ಕೆ ನಿರ್ಗಮಿಸಿದ ಡ್ಯಾನಿಷ್ ಕನೇರಿಯಾ: ಪಾಕ್‌ನಲ್ಲಿ ಊಹಾಪೋಹ