ಮೊಹಾಲಿ: ವೃದ್ಧಿಮಾನ್ ಸಹಾ ಗಾಯಗೊಂಡ ಹಿನ್ನಲೆಯಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ವಿಕೆಟ್ ಕೀಪರ್ ಆಗಿ ಪಾರ್ಥಿವ್ ಪಟೇಲ್ ರನ್ನು ಆಯ್ಕೆ ಮಾಡಿದ್ದು ಕೀಪಿಂಗ್ ನಲ್ಲಿ ಅವರ ನೈಪುಣ್ಯತೆಯ ಆಧಾರದಲ್ಲಿ ಎಂದು ಕೋಚ್ ಅನಿಲ್ ಕುಂಬ್ಳೆ ಹೇಳಿಕೊಂಡಿದ್ದಾರೆ.
ಮೂರು ವರ್ಷಗಳ ನಂತರ ಪಾರ್ಥಿವ್ ಟೀಂ ಇಂಡಿಯಾಕ್ಕೆ ಆಯ್ಕೆಯಾಗಿದ್ದು ಅಚ್ಚರಿಯುಂಟು ಮಾಡಿತ್ತು. ನನಗೆ ಎಂದಾದರೂ ಒಂದು ದಿನ ಕರೆ ಬಂದೇ ಬರುತ್ತದೆಂದು ಗೊತ್ತಿತ್ತು ಎಂದು ಸ್ವತಃ ಪಾರ್ಥಿವ್ ಹೇಳಿಕೊಂಡಿದ್ದರು.
ವಿಕೆಟ್ ಕೀಪರ್ ಸ್ಥಾನಕ್ಕೆ ದಿನೇಶ್ ಕಾರ್ತಿಕ್ ಅವರನ್ನು ಪರಿಗಣಿಸದೇ ಇರುವುದಕ್ಕೆ ಕಾರಣವೇನೆಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುಂಬ್ಳೆ, ದಿನೇಶ್ ಸದ್ಯಕ್ಕೆ ತಮಿಳು ನಾಡು ತಂಡದ ಪರ ಕೀಪಿಂಗ್ ಮಾಡುತ್ತಿಲ್ಲ ಎಂಬ ಮಾಹಿತಿ ಬಂತು. ಹೀಗಾಗಿ ಅವರನ್ನು ಪರಿಗಣಿಸಿಲ್ಲ ಎಂದರು.
ಬೆಂಗಾಳದ ರಿಷಬ್ ಪಂತ್ ರಣಜಿ ಟ್ರೋಫಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿಯೂ ಅವರನನ್ನು ಕಡೆಗಣಿಸಲಾಗಿದೆ. ರಿಷಬ್ ಬ್ಯಾಟಿಂಗ್ ನಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆದರೆ ಪಾರ್ಥಿವ್ ರನ್ನು ಅವರ ಕೀಪಿಂಗ್ ಗುಣಮಟ್ಟವನ್ನು ಆಧರಿಸಿ ಆಯ್ಕೆ ಮಾಡಲಾಗಿದೆ ಎಂದು ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ. ಇದೇ ಕುಂಬ್ಳೆ ಬೌಲಿಂಗ್ ನಲ್ಲಿ ಪಾರ್ಥಿವ್ ಅಂದು ಕೀಪಿಂಗ್ ಮಾಡಲು ಪರದಾಡುತ್ತಿದ್ದರು. ಕೊನೆಗೆ ಮೈದಾನದಲ್ಲೇ ಪಾರ್ಥಿವ್ ಗೆ ಕುಂಬ್ಳೆ ಕೀಪಿಂಗ್ ಪಾಠ ಮಾಡುತ್ತಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ