ಕರಾಚಿ: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂ ಬಂಧನಕ್ಕೆ ಸ್ಥಳೀಯ ನ್ಯಾಯಾಲಯವೊಂದು ವಾರಂಟ್ ಹೊರಡಿಸಿದೆ. ಅದಕ್ಕೆ ಇರುವ ಕಾರಣವೇ ತಮಾಷೆಯಾಗಿದೆ.
ಅಸಲಿಗೆ ಇದು ಅಕ್ರಂ ತಾವೇ ಮೈಮೇಲೆ ಎಳೆದುಕೊಂಡ ಪ್ರಕರಣ. ಕಳೆದ ವರ್ಷ ಆಗಸ್ಟ್ ನಲ್ಲಿ ನನ್ನ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಯಾರೋ ಕೊಲೆ ನಡೆಸುವ ಉದ್ದೇಶದಿಂದ ನನ್ನ ಮೇಲೆ ದಾಳಿ ಮಾಡಿದ್ದಾರೆ ಎಂದು ಅಕ್ರಂ ಪೊಲೀಸರಿಗೆ ದೂರು ನೀಡಿದ್ದರು.
ಇದು ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ ವಿಚಾರಣೆಗೆ ಹಾಜರಾಗುವಂತೆ 31 ಬಾರಿ ನ್ಯಾಯಾಲಯ ಸೂಚಿಸಿದ್ದರೂ, ಅಕ್ರಂ ಆಗಮಿಸಿರಲಿಲ್ಲ. ಇನ್ನು ನ್ಯಾಯಾಲಯ ಸುಮ್ಮನಿರುತ್ತದೆಯೇ? ಅವರೇ ಬಾರದಿದ್ದರೆ, ಬಂಧಿಸಿಯಾದರೂ, ಕರೆ ತನ್ನಿ ಎಂದು ವಾರಂಟ್ ಜಾರಿ ಮಾಡಿದೆ.
ಹೀಗಾಗಿ ತಾವೇ ಎಳೆದುಕೊಂಡ ಪ್ರಕರಣದಲ್ಲಿ ತಾವೇ ಸಿಕ್ಕಿ ಹಾಕಿಕೊಂಡಿದ್ದಾರೆ. ಆದರೆ ಸದ್ಯಕ್ಕೆ ಆಸ್ಟ್ರೇಲಿಯಾ ಸರಣಿಗಾಗಿ ಕುಟುಂಬ ಸಮೇತ ಅಕ್ರಂ ಆಸೀಸ್ ಗೆ ತೆರಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ