Select Your Language

Notifications

webdunia
webdunia
webdunia
webdunia

ಪಾಕಿಸ್ತಾನದ ಅತೀ ಹಿರಿಯ ಕ್ರಿಕೆಟಿಗ ನಿಧನ

ಪಾಕಿಸ್ತಾನದ ಅತೀ ಹಿರಿಯ ಕ್ರಿಕೆಟಿಗ ನಿಧನ
Karachi , ಭಾನುವಾರ, 1 ಜನವರಿ 2017 (08:17 IST)
ಕರಾಚಿ: ಪಾಕಿಸ್ತಾನ ಕ್ರಿಕೆಟ್ ತನ್ನ ಹಿರಿಯನನ್ನು ಕಳೆದುಕೊಂಡಿದೆ. ದೇಶದ ಪರ ಆಡಿದ್ದ ಅತ್ಯಂತ ಹಿರಿಯ ಕ್ರಿಕೆಟಿಗ ಇಮ್ತಿಯಾಜ್ ಅಹಮ್ಮದ್ ಲಂಡನ್ ನಲ್ಲಿ ಕೊನೆಯುಸಿರೆಳೆದಿದ್ದಾರೆ.

89 ವರ್ಷದ ಇಮ್ತಿಯಾಜ್ ವಯೋ ಸಹಜ ಕಾಯಿಲೆಯಿಂದಾಗಿ ಮೃತಪಟ್ಟಿದ್ದಾರೆ. ಜನುಮ ದಿನಕ್ಕೆ ಇನ್ನು ಐದೇ ದಿನ ಬಾಕಿಯಿರುವಾಗ ನಿಧನರಾಗಿದ್ದಾರೆ. ಇಮ್ತಿಯಾಜ್ ಚೊಚ್ಚಲ ಭಾರತ ಪ್ರವಾಸ ಮಾಡಿದ ಪಾಕ್ ತಂಡದ ಸದಸ್ಯರಾಗಿದ್ದರು.

ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಗಿದ್ದ ಇಮ್ತಿಯಾಜ್ 2079 ರನ್ ಪೇರಿಸಿದ್ದರು. ನ್ಯೂಜಿಲೆಂಡ್ ವಿರುದ್ಧ ಲಾಹೋರ್ ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ದ್ವಿಶತಕವನ್ನೂ ಸಿಡಿಸಿದ್ದರು. ಸದ್ಯಕ್ಕೆ ಲಂಡನ್ ವಾಸಿಯಾಗಿದ್ದರು.

ತನ್ನ ದೇಶದ ಹಿರಿಯ ಕ್ರಿಕೆಟಿಗನ ಸಾವಿಗೆ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಶಹರ್ಯಾರ್ ಖಾನ್ ಸಂತಾಪ ವ್ಯಕ್ತಪಡಿಸಿದ್ದಾರೆ. ಇದೀಗ ಇಮ್ತಿಯಾಜ್ ನಿಧನದ ನಂತರ ಲಂಡನ್ ನಿವಾಸಿ ವಕಾರ್ ಹಸನ್ ಪಾಕಿಸ್ತಾನದ ಅತ್ಯಂತ ಹಿರಿಯ ಕ್ರಿಕೆಟಿಗನೆಂಬ ಗೌರವ ಪಡೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ವರ್ಷದ ಮರುದಿನವೇ ಬಿಸಿಸಿಐಗೆ ಕಾದಿದೆ ಶಾಕ್!