Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿಯನ್ನು ಪಾಕ್ ಗೆ ಸೆಳೆದುಕೊಳ್ಳಲು ಒಂದು ಒಪ್ಪಂದ!

ವಿರಾಟ್ ಕೊಹ್ಲಿಯನ್ನು ಪಾಕ್ ಗೆ ಸೆಳೆದುಕೊಳ್ಳಲು ಒಂದು ಒಪ್ಪಂದ!
Karachi , ಗುರುವಾರ, 8 ಜೂನ್ 2017 (08:54 IST)
ಕರಾಚಿ: ವಿರಾಟ್ ಕೊಹ್ಲಿಯಂತಹ ಆಟಗಾರ ನಮ್ಮ ತಂಡದಲ್ಲೂ ಇರಬೇಕೆಂಬುದು ಎಲ್ಲಾ ತಂಡಗಳ ಬಯಕೆ. ಆದರೆ ಪಾಕಿಸ್ತಾನದ ಪತ್ರಕರ್ತರೊಬ್ಬರು ಅದಕ್ಕಾಗಿ ಒಂದು ಒಪ್ಪಂದ ಮಾಡಿಕೊಳ್ಳಲು ಮುಂದಾಗಿದ್ದಾರೆ!

 
ನಝ್ರಾನಾ ಗಫರ್ ಎಂಬ ಪಾಕ್ ಪತ್ರಕರ್ತ ತಮ್ಮ ಟ್ವಿಟರ್ ಪೇಜ್ ನಲ್ಲಿ ಕೊಹ್ಲಿಗೆ ಒಂದು ಆಫರ್ ನೀಡಿದ್ದಾರೆ. ಬೇಕಿದ್ದರೆ ನಮ್ಮ ತಂಡದ ಎಲ್ಲಾ ಆಟಗಾರರನ್ನು ನಿಮಗೆ ಕೊಡುತ್ತೇವೆ. ಕೊಹ್ಲಿಯನ್ನು ಒಂದು ವರ್ಷದ ಮಟ್ಟಿಗೆ ನಮಗೆ ನೀಡಿ ಎಂದು ಗಫರ್ ಆಫರ್ ನೀಡಿದ್ದಾರೆ.

ಆದರೆ ಪಾಕ್ ತಂಡವನ್ನು ಟೀಕಿಸುವ ಆತುರದಲ್ಲಿ ಗಫರ್ ನೀಡಿದ ಈ ಹೇಳಿಕೆಗೆ ಪಾಕ್ ಅಭಿಮಾನಿಗಳು ತೀರಾ ಸಿಟ್ಟಾಗಿದ್ದಾರೆ. ಹೋಗಿ ಹೋಗಿ ಭಾರತದ ಬಳಿ ಭಿಕ್ಷೆ ಬೇಡುವುದಾ ಎಂದು ಕೆಲವರು ಗಫರ್ ಸಂದೇಶಕ್ಕೆ ಪ್ರತಿಕ್ರಿಯಿಸಿದ್ದಾರೆ.

ಇತ್ತ ಭಾರತೀಯ ಅಭಿಮಾನಿಗಳೂ ಗಫರ್ ಗೆ ಸರಿಯಾಗಿ ಜಾಡಿಸಿದ್ದಾರೆ. ನಿಮಗೆ ಕಾಶ್ಮೀರ ಬೇಕು, ಸಚಿನ್ ಬೇಕು, ಧೋನಿ ಬೇಕು ಇದೀಗ ವಿರಾಟ್ ಕೂಡಾ ಬೇಕೇ ಎಂದು ಅಭಿಮಾನಿಗಳು ಪತ್ರಕರ್ತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

 
http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಲಂಡನ್ ವಿಮಾನ ಹತ್ತುವ ಮೊದಲು ರವಿ ಶಾಸ್ತ್ರಿಯೇ ಬೇಕು ಎಂದು ಪಟ್ಟು ಹಿಡಿದಿದ್ದ ವಿರಾಟ್ ಕೊಹ್ಲಿ!