Select Your Language

Notifications

webdunia
webdunia
webdunia
webdunia

ಪಾಕಿಸ್ತಾನ ಕ್ರಿಕೆಟಿಗನ ಅವಾಂತರ!

ಪಾಕಿಸ್ತಾನ ಕ್ರಿಕೆಟಿಗನ ಅವಾಂತರ!
Karachi , ಶುಕ್ರವಾರ, 3 ಮಾರ್ಚ್ 2017 (10:14 IST)
ಕರಾಚಿ: ಪಾಕಿಸ್ತಾನ ಕ್ರಿಕೆಟಿಗರಿಗೂ ವಿವಾದಕ್ಕೂ ಬಿಡಿಸಲಾರದ ನಂಟಿದೆಯೇನೋ.. ಇದೀಗ ಬ್ಯಾಟ್ಸ್ ಮನ್ ಉಮರ್ ಅಕ್ಮಲ್ ಪೊಲೀಸರೊಂದಿಗೆ ವಾಗ್ವಾದ ನಡೆಸಿ ಎಡವಟ್ಟು ಮಾಡಿಕೊಂಡಿದ್ದಾರೆ.


ಲಾಹೋರ್ ನಲ್ಲಿ ಸಂಚರಿಸುತ್ತಿದ್ದಾಗ ಸಂಚಾರಿ ನಿಯಮ ಉಲ್ಲಂಘಿಸಿದ್ದಲ್ಲದೇ, ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಅಷ್ಟೇ ಅಲ್ಲದೆ, ತಮ್ಮನ್ನು ಪ್ರಶ್ನಿಸಿದ ಪೊಲೀಸರೊಂದಿಗೇ ವಾಗ್ವಾದಕ್ಕಿಳಿದಿದ್ದಾರೆ. ಹಿಂದೆಯೂ ಹಲವು ಬಾರಿ ಹೀಗೆಯೇ ಗಲಾಟೆ ಮಾಡಿಕೊಂಡು ಎಡವಟ್ಟು ಮಾಡಿಕೊಂಡಿದ್ದರು.

ಈ ಬಾರಿ ಪೊಲೀಸರು ತಮ್ಮೊಂದಿಗೆ ಅವಾಚ್ಯ ಶಬ್ಧಗಳಲ್ಲಿ ಮಾತನಾಡಿದ್ದಕ್ಕೆ ಜಗಳವಾಡಿದೆ ಎಂದಿದ್ದಾರೆ. ಮೊನ್ನೆಯಷ್ಟೇ ಅಕ್ಮಲ್ ತಮ್ಮನ್ನು ತಾವು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಹೋಲಿಸಿಕೊಂಡು ನಗೆಪಾಟಲಿಗೀಡಾಗಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಚಿನ್ ತೆಂಡುಲ್ಕರ್ ಬಿಚ್ಚಿಟ್ಟ ರಹಸ್ಯ!