Webdunia - Bharat's app for daily news and videos

Install App

ಸಾನಿಯಾ ಮಿರ್ಜಾ ಬಳಿ ಕ್ಷಮೆ ಕೇಳಿದ ಪಾಕ್ ಕ್ರಿಕೆಟಿಗ! ಕಾರಣವೇನು ಗೊತ್ತಾ?

Webdunia
ಸೋಮವಾರ, 30 ಅಕ್ಟೋಬರ್ 2017 (10:59 IST)
ಹೈದರಾಬಾದ್: ಟೆನಿಸ್ ಬೆಡಗಿ ಸಾನಿಯಾ ಮಿರ್ಜಾ ಮತ್ತು ಕ್ರಿಕೆಟಿಗ ಶೊಯೇಬ್ ಮಲಿಕ್ ರದ್ದು ಇಂಡೋ-ಪಾಕ್ ವಿವಾಹ. ಇವರಿಬ್ಬರ ನಡುವೆ ಬಂದ ಪಾಕ್ ಕ್ರಿಕೆಟಿಗ ಶಹದಾಬ್ ಖಾನ್ ಸಾನಿಯಾ ಕ್ಷಮೆ ಕೋರಿದ್ದಾರೆ.

 
ಅಂದ ಹಾಗೆ ನಡೆದಿದ್ದು ಇದೆಲ್ಲಾ ತಮಾಷೆಗಾಗಿ! ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ ಮ್ಯಾನ್ ಆಫ್ ದಿ ಸೀರೀಸ್ ಬೈಕ್ ಮೇಲೆ ಕುಳಿತ ಶೊಯೇಬ್ ಫೋಟೋವನ್ನು ತಮ್ಮ ಟ್ವಿಟರ್ ಪೇಜ್ ನಲ್ಲಿ ಹಾಕಿದ ಸಾನಿಯಾ ಮಿರ್ಜಾ ‘ನಾವೊಂದು ರೈಡ್ ಹೋಗೋಣ್ವೇ?’ ಎಂದು ಪತಿ ಶೊಯೇಬ್ ಗೆ ಕೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಶೊಯೇಬ್ ‘ಖಂಡಿತಾ ಸ್ವೀಟ್ ಹಾರ್ಟ್. ಆದ್ರೆ ಬೇಗ ರೆಡಿ ಆಗಿ ಬರ್ಬೇಕು. ನಾನು ಹೊರಟಾಯ್ತು’ ಎಂದು ಉತ್ತರಿಸಿದ್ದಾರೆ. ಆಗಲೇ ಸಾನಿಯಾಗೆ ಇನ್ನೊಂದು ಫೋಟೋ ಕಾಣಿಸಿದ್ದು. ಅದರಲ್ಲಿ ಬೈಕ್ ನಲ್ಲಿ ಶೊಯೇಬ್ ಹಿಂದೆ ಪಾಕ್ ಕ್ರಿಕೆಟಿಗ ಶಹದಾಬ್ ಕೂತಿದ್ದರು.

ಹೀಗಾಗಿ ‘ಸಾರಿ.. ಆಗ್ಲೇ ಹಿಂದಿನ ಸೀಟು ಭರ್ತಿಯಾಗಿದೆ ಅನಿಸುತ್ತದೆ’ ಎಂದರು ಸಾನಿಯಾ. ಪತ್ನಿಯ ಕಾಮೆಂಟ್ ನೋಡಿ ಶೊಯೇಬ್ ಹಾಗೇನೂ ಇಲ್ಲ ಎಂದರು. ಇವರಿಬ್ಬರು ಟ್ವೀಟ್ ಲವ್  ನೋಡಿ ಅದೇನನಿಸಿತೋ ಶಹದಾಬ್ ಗೆ. ತಕ್ಷಣ ತಮ್ಮ ಟ್ವಿಟರ್ ಪೇಜ್ ಮೂಲಕ ಗಂಡ-ಹೆಂಡಿರ ನಡುವೆ ಮೂರನೆಯವನಾಗಿ ಬಂದಿದ್ದಕ್ಕೆ ಕ್ಷಮೆ ಕೋರಿದರು!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಏಷ್ಯಾ ಕಪ್ ಗೆ ತಿಲಕ್ ವರ್ಮ ಬಿಟ್ಟು ಶುಭಮನ್ ಗಿಲ್ ಗೆ ಮಣೆ: ಇದೆಂಥಾ ಲೆಕ್ಕಾಚಾರ

ತಂದೆ ಸಚಿನ್ ಹಾದಿಯಲ್ಲೇ ನಡೆದ ಮಗ ಅರ್ಜುನ್‌, ಕೈ ಹಿಡಿಯಲಿರುವ ಸಾನಿಯಾ ವಯಸ್ಸೆಷ್ಟು ಗೊತ್ತಾ

ಮತ್ತೆ ಬ್ಯಾಟ್‌ ಹಿಡಿಯಲು ಸಜ್ಜಾದ ಸೂರ್ಯಕುಮಾರ್‌ ಯಾದವ್: ಏಷ್ಯಾ ಕಪ್‌ ಟೂರ್ನಿಗೆ ಮುನ್ನ ಪರೀಕ್ಷೆಯಲ್ಲಿ ಪಾಸ್‌

ಸಚಿನ್ ಪುತ್ರ ಅರ್ಜುನ್ ತೆಂಡುಲ್ಕರ್ ನಿಶ್ಚಿತಾರ್ಥ: ಸಚಿನ್ ಸೊಸೆಯಾಗುತ್ತಿರುವ ಸಾನಿಯಾ ಯಾರು

Rishabh Pant: ಕ್ರಿಕೆಟ್ ಆಡಲಾಗುತ್ತಿಲ್ಲ, ಅಸಹಾಯಕನಾದ ರಿಷಭ್ ಪಂತ್: ವಿಡಿಯೋ ನೋಡಿ

ಮುಂದಿನ ಸುದ್ದಿ
Show comments