Select Your Language

Notifications

webdunia
webdunia
webdunia
webdunia

ಟೆಸ್ಟ್ ಕ್ರಿಕೆಟ್ ನಲ್ಲಿ ಈ ದಾಖಲೆ ಮಾಡಲು ವಿರಾಟ್ ಕೊಹ್ಲಿಗೆ ಒಂದೇ ಗೆಲುವು ಸಾಕು

ಟೆಸ್ಟ್ ಕ್ರಿಕೆಟ್ ನಲ್ಲಿ ಈ ದಾಖಲೆ ಮಾಡಲು ವಿರಾಟ್ ಕೊಹ್ಲಿಗೆ ಒಂದೇ ಗೆಲುವು ಸಾಕು
NewDelhi , ಗುರುವಾರ, 1 ಡಿಸೆಂಬರ್ 2016 (11:52 IST)
ನವದೆಹಲಿ: ಭಾರತ ಕ್ರಿಕೆಟ್ ತಂಡದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಅಪರೂಪದ ದಾಖಲೆಯೊಂದರ ಹೊಸ್ತಿಲಲ್ಲಿದ್ದಾರೆ. ಅವರಿಗೆ ಈ ದಾಖಲೆ ಮಾಡಲು ಒಂದೇ ಗೆಲುವು ಸಾಕು.

ನಾಯಕರಾಗಿ ಹೆಚ್ಚು ಪಂದ್ಯಗಳನ್ನು ಆಡಿಲ್ಲ. ಆಗಲೇ ತವರಿನಲ್ಲಿ ಅತೀ ಹೆಚ್ಚು ಪಂದ್ಯಗಳನ್ನು ಗೆದ್ದ ನಾಯಕ ಎನ್ನುವ ಮೊಹಮ್ಮದ್ ಅಜರುದ್ದೀನ್ ದಾಖಲೆ ಸರಿಗಟ್ಟಲು ಅವರಿಗೆ ಒಂದು ಟೆಸ್ಟ್ ಗೆಲುವು ಸಾಕು. ಮಾಜಿ ನಾಯಕ ಅಜರುದ್ದೀನ್ ಒಟ್ಟು 9 ಗೆಲುವು ಕಂಡಿದ್ದರು. ಸದ್ಯ 8 ಗೆಲುವು ಪಡೆದಿರುವ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಕೊಹ್ಲಿಗಿಂತ ಕೆಳಗಿನ ಸ್ಥಾನದಲ್ಲಿರುವವರು ಮಹೇಂದ್ರ ಸಿಂಗ್ ಧೋನಿ. ಅವರು ತವರಿನಲ್ಲಿ 7 ಗೆಲುವು ಕೊಡಿಸಿದ್ದಾರೆ. ಸೌರವ್ ಗಂಗೂಲಿ 6 ಟೆಸ್ಟ್ ಪಂದ್ಯ ಮತ್ತು ಸಚಿನ್ ತೆಂಡುಲ್ಕರ್ 4 ಟೆಸ್ಟ್ ಪಂದ್ಯಗಳನ್ನು ತವರಿನಲ್ಲಿ ನಾಯಕರಾಗಿ ಗೆದ್ದಿದ್ದಾರೆ. ಟೀಂ ಇಂಡಿಯಾ ಈಗಿರುವ ಫಾರ್ಮ್ ನೋಡಿದರೆ ಮುಂದಿನ ಪಂದ್ಯದಲ್ಲೇ ಕೊಹ್ಲಿ ಆ ದಾಖಲೆ ಮಾಡುವುದು ಕಷ್ಟವೇನಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮದುಮಗ ಯುವರಾಜ್ ಸಿಂಗ್ ಗೆ ಗೌತಮ್ ಗಂಭೀರ್ ವಿಶ್ ಮಾಡಿದ್ದು ಹೇಗೆ ಗೊತ್ತಾ?