Select Your Language

Notifications

webdunia
webdunia
webdunia
webdunia

ಮದುಮಗ ಯುವರಾಜ್ ಸಿಂಗ್ ಗೆ ಗೌತಮ್ ಗಂಭೀರ್ ವಿಶ್ ಮಾಡಿದ್ದು ಹೇಗೆ ಗೊತ್ತಾ?

ಮದುಮಗ ಯುವರಾಜ್ ಸಿಂಗ್ ಗೆ ಗೌತಮ್ ಗಂಭೀರ್ ವಿಶ್ ಮಾಡಿದ್ದು ಹೇಗೆ ಗೊತ್ತಾ?
Chandigarh , ಗುರುವಾರ, 1 ಡಿಸೆಂಬರ್ 2016 (11:32 IST)
ನವದೆಹಲಿ: ನಿನ್ನೆಯಷ್ಟೇ ಚಂಡೀಘಡದಲ್ಲಿ ತನ್ನ ಪ್ರೀತಿಯ ಹುಡುಗಿ ಹೇಝಲ್ ಕೀಚ್ ರನ್ನು ಮದುವೆಯಾದ ಕ್ರಿಕೆಟಿಗ ಯುವರಾಜ್ ಸಿಂಗ್ ಗೆ ಶುಭಾಷಯದ ಮಹಾಪೂರವೇ ಹರಿದು ಬರುತ್ತಿದೆ. ಆದರೆ ಕ್ರಿಕೆಟಿಗ ಗೌತಮ್ ಗಂಭೀರ್ ಬೇರೆ ರೀತಿಯಲ್ಲಿ ವಿಶ್ ಮಾಡಿದ್ದಾರೆ.

ತಮ್ಮ ಟ್ವಿಟರ್ ಪೇಜ್ ನಲ್ಲಿ ಯುವಿಗೆ ಶುಭಾಷಯ ಹಾರೈಸಿದ ಗೌತಮ್ ಗಂಭೀರ್ ನೋಡಪ್ಪಾ ನಿನಗೆ ಇನ್ನು ಮೈದಾನದಲ್ಲಿ ಮತ್ತು ಮನೆಯಲ್ಲಿ ಬೌನ್ಸರ್ ಎದುರಿಸಬೇಕಾಗುತ್ತದೆ. ಎರಡೂ ಬೌನ್ಸರ್ ಗಳನ್ನು ಹೇಗೆ ನಿಭಾಯಿಸಬೇಕೆಂದು ನನಗೆ ಗೊತ್ತು. ಮುಂದಿನ ಬಾರಿ ಸಿಕ್ಕಾಗ ಹೇಳಿಕೊಡುತ್ತೇನೆ. ಅಲ್ಲಿಯವರೆಗೆ ಆಲ್ ದಿ ಬೆಸ್ಟ್ ಎಂದು ಹಾರೈಸಿದ್ದಾರೆ.

ಇನ್ನು ಮದುವೆ ಮನೆಯಲ್ಲಿ ಗೆಳೆಯ ಯುವಿ ಪಕ್ಕವೇ ನಿಂತಿದ್ದ ಹರ್ಭಜನ್ ಸಿಂಗ್ ಕೂಡಾ ಯುವಿ ಮದುವೆಗೆ ಮೊದಲು ಟ್ವಿಟರ್ ನಲ್ಲಿ ಪ್ರಕಟಿಸಿದ ಫೋಟೋ ನೋಡಿ ಗೆಳೆಯನನ್ನು ಕಿಚಾಯಿಸಿದ್ದಾರೆ. ಶುಭಾಷಯಗಳು ಬ್ರದರ್. ನಿನ್ನ ಕಣ್ಣುಗಳು ಏನೋ ಹೇಳಲು ಬಯಸುತ್ತಿರುವ ಹಾಗಿದೆಯಲ್ಲ ಎಂದು ಕಿಚಾಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಣಜಿ ಟ್ರೋಫಿ ಕ್ರಿಕೆಟ್ ನಲ್ಲಿ ಮೊದಲ ತ್ರಿಶತ ಬಾರಿಸಿದ ಗುಜರಾತ್ ಕ್ರಿಕೆಟಿಗ