Select Your Language

Notifications

webdunia
webdunia
webdunia
webdunia

ರಣಜಿ ಟ್ರೋಫಿ ಕ್ರಿಕೆಟ್ ನಲ್ಲಿ ಮೊದಲ ತ್ರಿಶತ ಬಾರಿಸಿದ ಗುಜರಾತ್ ಕ್ರಿಕೆಟಿಗ

ರಣಜಿ ಟ್ರೋಫಿ ಕ್ರಿಕೆಟ್ ನಲ್ಲಿ ಮೊದಲ ತ್ರಿಶತ ಬಾರಿಸಿದ ಗುಜರಾತ್ ಕ್ರಿಕೆಟಿಗ
Belagavi , ಗುರುವಾರ, 1 ಡಿಸೆಂಬರ್ 2016 (10:37 IST)
ಬೆಳಗಾವಿ: ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ನಲ್ಲಿ ಪಂಜಾಬ್ ವಿರುದ್ಧ ಗುಜರಾತ್ ನ ಪ್ರಿಯಾಂಕ್ ಕೀರ್ತಿ ಪಂಚಾಲ್ ತ್ರಿಶತಕ ಸಿಡಿಸಿದ್ದಾರೆ. ಈ ಮೂಲಕ ಗುಜರಾತ್ ತಂಡದ ಪರ ರಣಜಿ ಟ್ರೋಫಿಯಲ್ಲಿ ತ್ರಿಶತಕ ಬಾರಿಸಿದ ಮೊದಲ ಕ್ರಿಕೆಟಿಗ ಎನ್ನುವ ದಾಖಲೆ ಮಾಡಿದ್ದಾರೆ.

ಬರೋಬ್ಬರಿ 460 ಎಸೆತ ಎದುರಿಸಿದ ಪಂಚಾಲ್ 32 ಬೌಂಡರಿಗಳೊಂದಿಗೆ 314 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಹಿಂದೆ ಗುಜರಾತ್ ಪರ ಮುಕುಂದ್ ಪರ್ಮಾರ್ 283 ರನ್ ಗಳಿಸಿದ್ದೇ ಗುಜರಾತ್ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿತ್ತು. ಇದರಿಂದಾಗಿ ಗುಜರಾತ್ ಒಟ್ಟಾರೆ 6 ವಿಕೆಟ್ ಗೆ  624 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ.

ಅತ್ತ ಕರ್ನಾಟಕ ಮತ್ತು ಸೌರಾಷ್ಟ್ರ ನಡುವಿನ ಪಂದ್ಯದಲ್ಲಿ ಸೌರಾಷ್ಟ್ರ 6 ವಿಕೆಟ್ ಕಳೆದುಕೊಂಡು ಭರ್ತಿ 300 ರನ್ ಗಳಿಸಿದ್ದು, ಒಟ್ಟಾರೆ 100 ರನ್ ಗಳ ಮುನ್ನಡೆ ಪಡೆದಿದೆ. ಕರ್ನಾಟಕದ ಪರ ನಾಯಕ ವಿನಯ್ ಕುಮಾರ್ ನಾಲ್ಕು ವಿಕೆಟ್ ಕಿತ್ತು ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

6 ರ ಪೋರ ಏಷ್ಯಾ ಚಾಂಪಿಯನ್!