ದುಬೈ: ಚೆಂಡು ವಿರೂಪಗೊಳಿಸಿ ಸಿಕ್ಕಿಬಿದ್ದಿದ್ದ ದ. ಆಫ್ರಿಕಾ ಕ್ರಿಕೆಟ್ ತಂಡದ ನಾಯಕ ಫಾ ಡು ಪ್ಲೆಸಿಸ್ ಶಿಕ್ಷೆ ಪಡೆಯುವುದನ್ನು ತಪ್ಪಿಸಲಾಗುತ್ತಿಲ್ಲ. ಶಿಕ್ಷೆಯನ್ನು ಪುನರ್ ಪರಿಶೀಲಿಸುವಂತೆ ಐಸಿಸಿಗೆ ಮೇಲ್ಮನವಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿದೆ.
ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಚೆಂಡು ವಿರೂಪಗೊಳಿಸಿರುವುದು ಸಾಬೀತಾದ ಹಿನ್ನಲೆಯಲ್ಲಿ ಐಸಿಸಿಯ ಶಿಸ್ತು ಸಮಿತಿ ಅವರಿಗೆ 100 ಶೇಕಡಾ ಪಂದ್ಯದ ಶುಲ್ಕ ಮರಳಿಸುವಂತೆ ಮತ್ತು 3 ಡಿಮೆರಿಟ್ ಪಾಯಿಂಟ್ ಶಿಕ್ಷೆ ನೀಡಿತ್ತು. ಇದರ ವಿರುದ್ಧ ಪ್ಲೆಸಿಸ್ ಮೇಲ್ಮನವಿ ಸಲ್ಲಿಸಿದ್ದರು.
ಆದರೆ ಶಿಸ್ತು ಸಮಿತಿಯ ಅಧ್ಯಕ್ಷ ಮೈಕಲ್ ಬೆಲೂಫ್ ಇದನ್ನು ತಿರಸ್ಕರಿಸಿದ್ದಾರೆ. ಪ್ಲೆಸಿಸ್ ಐಸಿಸಿ ಶಿಸ್ತು ಸಮಿತಿಯ 2.2.9. ವಿಭಾಗದಲ್ಲಿ ತಪ್ಪಿತಸ್ಥರಾಗಿದ್ದಾರೆ. ಯಾವುದೇ ಕಾರಣಕ್ಕೂ ಅವರ ವಿರುದ್ಧ ಹೊರಿಸಲಾಗಿರುವ ಶಿಕ್ಷೆಯನ್ನು ಕಡಿತಗೊಳಿಸುವುದಿಲ್ಲ ಎಂದು ಖಡಾ ಖಂಡಿತವಾಗಿ ಹೇಳಿದ್ದಾರೆ. ಹೀಗಾಗಿ ಈಗ ಪ್ಲೆಸಿಸ್ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲೇ ಬೇಕಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ