ವೆಸ್ಟ್ ಇಂಡೀಸ್ ಮಾಜಿ ವೇಗಿ ಫ್ರಾಂಕ್ಲಿನ್ ರೋಸ್ ನ್ಯೂಜಿಲೆಂಡ್ ಕಪ್ಪುವರ್ಣಿಯ ಅಂತಾರಾಷ್ಟ್ರೀಯ ಕ್ರಿಕೆಟಿಗರಿಗೆ ಸುರಕ್ಷಿತವಲ್ಲ ಎಂದು ಪ್ರತಿಪಾದಿಸಿದ್ದಾರೆ. ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಗುರಿಯಾಗಿದ್ದ 44 ವರ್ಷದ ಮಾಜಿ ಆಟಗಾರ ನ್ಯೂಜಿಲೆಂಡ್‌ನಲ್ಲಿ ತಮ್ಮ ದುಃಸ್ವಪ್ನವನ್ನು ಬಿಚ್ಚಿಟ್ಟಿದ್ದಾರೆ.
ರೋಸ್ 1997-2000ದ ಅವಧಿಯಲ್ಲಿ 19 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಆಕ್ಲೆಂಡ್‌ನಲ್ಲಿ ಆಡುವುದಕ್ಕೆ ಮತ್ತು ಕೋಚ್ ಹುದ್ದೆ ನಿರ್ವಹಿಸುವುದಕ್ಕೆ ಅವರು 2011ರಲ್ಲಿ ಉದ್ಯೋಗದ ವೀಸಾ ಪಡೆದುಕೊಂಡಿದ್ದರು.
ನೀವು ಒಬ್ಬರನ್ನು ದೇಶಕ್ಕೆ ಆಡುವಂತೆ ಮತ್ತು ಕೋಚ್ ಮಾಡುವಂತೆ ಆಮಂತ್ರಣ ನೀಡಿ ಬಳಿಕ ಯಾವುದೇ ಕಾರಣವಿಲ್ಲದೇ ಜೈಲಿಗೆ ದೂಡಿ ದೇಶದಿಂದ ಹೊರಹಾಕುವುದು ನ್ಯಾಯವಲ್ಲ. ನನ್ನನ್ನು ಏಳು ವಾರಗಳ ಕಾಲ ಜೈಲು ಕೋಣೆಯಲ್ಲಿ ಕೂಡಿಹಾಕಲು ಏನು ಮಾಡಿದ್ದೆ, ನಾನು ಸರಣಿ ಹಂತಕರು, ರೇಪಿಸ್ಟ್‌ಗಳು ಮತ್ತು ಮಾದಕ ವಸ್ತು ವ್ಯಾಪಾರಿಗಳ ಜತೆ ಒಂದೇ ಜೈಲು ಕೋಣೆಯಲ್ಲಿ ವಾಸಿಸಿದ್ದರಿಂದ ತೀವ್ರ ಆತಂಕಕ್ಕೊಳಗಾಗಿದ್ದೆ ಎಂದು ರೋಸ್ ಹೇಳಿದ್ದರು.
ರೋಸ್ ಅವರ ಮೇಲೆ 2012ರ ನವೆಂಬರ್‌ನಲ್ಲಿ ಹಲ್ಲೆ ನಡೆದ ನಂತರ ಅವರು ಆಸ್ಪತ್ರೆ ಸೇರಿದ್ದರು. ಅವರು ಗಾಯಗಳಿಂದ ಚೇತರಿಸಿಕೊಳ್ಳುವಾಗ ಅವರ ಶ್ವಾಸಕೋಶದಲ್ಲಿ ರಕ್ತಹೆಪ್ಪುಗಟ್ಟಿದ್ದರಿಂದ ದೇಶದಲ್ಲಿ ಇನ್ನಷ್ಟು ಕಾಲ ಇರಬೇಕಾಯಿತು. ಆದರೆ ರೋಸ್ ಮೇಲೆ ಲೈಂಗಿಕ ದೌರ್ಜನ್ಯದ ಕೇಸ್ ಹಾಕಿ ಜೈಲಿಗೆ ಕಳಿಸಲಾಯಿತು. ಬಳಿಕ ತಮ್ಮನ್ನು ಯಾವ ಕಾರಣವೂ ಇಲ್ಲದೇ ಗಡೀಪಾರು ಮಾಡಲಾಯಿತು ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ