Publish Date: Tue, 21 Jul 2020 (20:26 IST)
Updated Date: Tue, 21 Jul 2020 (20:30 IST)
ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟರ್ ಹಾಗೂ ಕಾಮೆಂಟೆಟರ್ ಸಂಜಯ್ ಮಾಂಜ್ರೆಕರ್ ಮನೆಗೆ ನಾಸಾ ದಿಂದ ವ್ಯಕ್ತಿಯೊಬ್ಬರು ಬಂದಿದ್ದಾರೆ.
ಅರೇ ನಾಸಾದಿಂದ ಬಂದ ವ್ಯಕ್ತಿಗೆ ಕ್ರಿಕೆಟರ್ ಮನೆಯಲ್ಲಿ ಏನು ಕೆಲಸ ಅಂತೆಲ್ಲಾ ಕೇಳಬೇಡಿ.
ಮಾಂಜ್ರೆಕರ್ ಗೆ ವೈಫೈ ಸಮಸ್ಯೆ ಎದುರಾಗಿತ್ತು. ಹೀಗಾಗಿ ಟೆಕ್ನಿಷಿಯನ್ ಗೆ ಕರೆ ಮಾಡಿದ್ದಾರೆ.
ಪಿಪಿಇ ಕಿಟ್ ಧರಿಸಿ ಬಂದ ಟೆಕ್ನಿಷಿಯನ್ ನನ್ನು ನೋಡಿದ ಮಾಂಜ್ರೆಕರ್ ನಾಸಾದಿಂದ ತಮ್ಮ ಮನೆಗೆ ವ್ಯಕ್ತಿಯೊಬ್ಬ ಬಂದಿದ್ದಾನೆ ಎಂದು ಕಮೆಂಟ್ ಮಾಡಿ, ಫೋಟೋ ಹಂಚಿಕೊಂಡಿದ್ದಾರೆ.