Publish Date: Fri, 06 Jan 2017 (09:48 IST)
Updated Date: Fri, 06 Jan 2017 (09:51 IST)
ಮುಂಬೈ: ಸೀಮಿತ ಓವರ್ ಗಳ ಪಂದ್ಯಗಳ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಕ್ಕೆ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಹಲವರು ಹಲವು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಸುನಿಲ್ ಗವಾಸ್ಕರ್ ಹೇಳಿಕೆ ಮಾತ್ರ ವಿಚಿತ್ರವಾಗಿದೆ.
ಸದ್ಯ ಧೋನಿ ನಾಯಕತ್ವಕ್ಕೆ ಮಾತ್ರ ವಿದಾಯ ಹೇಳಿದ್ದರಿಂದ ಬಚವಾದರು. ಒಂದು ವೇಳೆ ಅವರು ನಿವೃತ್ತಿ ಹೇಳಿದ್ದರೆ ಅವರ ಮನೆ ಮುಂದೆ ಧರಣಿ ಕೂರುತ್ತಿದ್ದೆ. ಯಾಕೆಂದರೆ ಧೋನಿಯಲ್ಲಿ ಇನ್ನೂ ಸಾಕಷ್ಟು ಆಟ ಬಾಕಿಯಿದೆ. ಅವರು ಇನ್ನೂ ಭಾರತ ಕ್ರಿಕೆಟ್ ಗೆ ಹೆಚ್ಚಿನ ಕೊಡುಗೆ ನೀಡಬೇಕಿದೆ ಎಂದು ಗವಾಸ್ಕರ್ ಹೇಳಿಕೊಂಡಿದ್ದಾರೆ.
ಅವರು ನಾಯಕತ್ವಕ್ಕಷ್ಟೇ ವಿದಾಯ ಹೇಳಿರುವುದು ಸಮಾಧಾನದ ಸಂಗತಿ ಎಂದು ಧೋನಿ ಗುಣಗಾನ ಮಾಡಿದ್ದಾರೆ. ಸದ್ಯ ಎಲ್ಲರೂ ಅವರು ಕೇವಲ ಆಟಗಾರನಾಗಿ ಯಾವ ರೀತಿ ಮೈದಾನದಲ್ಲಿರುತ್ತಾರೆ ಎಂಬುದೇ ಎಲ್ಲರ ಕುತೂಹಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ