Select Your Language

Notifications

webdunia
webdunia
webdunia
webdunia

ಐಸಿಸಿ ವಿಶ್ವ ಇಲೆವೆನ್ ಗೆ ಮಿಥಾಲಿ ರಾಜ್ ನಾಯಕಿ

ಐಸಿಸಿ ವಿಶ್ವ ಇಲೆವೆನ್ ಗೆ ಮಿಥಾಲಿ ರಾಜ್ ನಾಯಕಿ
ದುಬೈ , ಮಂಗಳವಾರ, 25 ಜುಲೈ 2017 (05:18 IST)
ದುಬೈ: ಇತ್ತೀಚೆಗೆ ನಡೆದ ವಿಶ್ವಕಪ್ ಕ್ರಿಕೆಟ್ ಕೂಟದಲ್ಲಿ ಎಲ್ಲರೂ ಹುಬ್ಬೇರುವಂತೆ ತಂಡವನ್ನು ಫೈನಲ್ ಗೇರಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಐಸಿಸಿ ಬಿಡುಗಡೆ ಮಾಡಿರುವ ವಿಶ್ವ ಇಲೆವೆನ್ ತಂಡದ ನಾಯಕಿಯಾಗಿದ್ದಾರೆ.

 
ಒತ್ತಡದ ಸನ್ನಿವೇಶಗಳಲ್ಲೂ ಕೂಲ್ ಆಗಿ ತಂಡವನ್ನು ನಿಭಾಯಿಸಿದ, ಫೈನಲ್ ನಲ್ಲಿ ಕೊನೆಯವರೆಗೂ ಹೋರಾಡುವ ಕೆಚ್ಚು ತೋರಿದ ಭಾರತೀಯ ನಾಯಕಿಗೆ ಸಹಜವಾಗಿಯೇ ಈ ಗೌರವ ಸಂದಿದೆ. ಇದಲ್ಲದೆ ವೈಯಕ್ತಿಕವಾಗಿಯೂ ಮಿಥಾಲಿ ಈ ಟೂರ್ನಿಯಲ್ಲಿ 403 ರನ್ ಗಳಿಸಿ ಮಿಂಚಿದ್ದಾರೆ.

ಮಿಥಾಲಿ ನಾಯಕಿಯಾಗಿರುವ ತಂಡದಲ್ಲಿ ದೀಪ್ತಿ ಶರ್ಮಾ, ಹರ್ಮನ್ ಪ್ರೀತ್ ಕೌರ್ ಕೂಡಾ ಭಾರತೀಯರ ಪೈಕಿ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ ನ ನಾಲ್ವರು ಆಟಗಾರರು ತಂಡದಲ್ಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಿಥಾಲಿ ರಾಜ್ ಬಳಗವನ್ನು ಟೀಕಿಸಿ ಇಂಗು ತಿಂದ ಮಂಗನಾದ ಸಂಜಯ್ ಮಂಜ್ರೇಕರ್