Publish Date: Tue, 14 Mar 2017 (09:24 IST)
Updated Date: Tue, 14 Mar 2017 (09:26 IST)
ಮುಂಬೈ: ವಿರಾಟ್ ಕೊಹ್ಲಿ ವರ್ತನೆ ಬಗ್ಗೆ, ಡಿಆರ್ ಎಸ್ ವಿಚಾರದಲ್ಲಿ ಅವರು ನಡೆದುಕೊಂಡ ಬಗ್ಗೆ ಆಸ್ಟ್ರೇಲಿಯಾದಲ್ಲಿ ಟೀಕೆಗಳು ವ್ಯಕ್ತವಾಗುತ್ತಿದ್ದರೂ, ಆಸೀಸ್ ನ ಮಾಜಿ ಬ್ಯಾಟಿಂಗ್ ದೈತ್ಯ ಮ್ಯಾಥ್ಯೂ ಹೇಡನ್ ಮಾತ್ರ ಕೊಹ್ಲಿ ಪರ ನಿಂತಿದ್ದಾರೆ.
ಯಾರು ಏನೇ ಹೇಳಲಿ, ಕೊಹ್ಲಿ ಸರಿಯಾದ ದಾರಿಯಲ್ಲೇ ಇದ್ದಾರೆ. ಅವರ ದೇಹ ಭಾಷೆ, ಮೈದಾನದಲ್ಲಿ ನಡೆದುಕೊಳ್ಳುವ ರೀತಿ ಸರಿಯಾಗಿಯೇ ಇದೆ. ಅವರು ಆಟಗಾರರನ್ನು ಗೌರವಿಸುತ್ತಾರೆ. ಶಿಸ್ತು ಅಳವಡಿಸಿಕೊಂಡಿದ್ದಾರೆ ಎಂದು ಕೊಹ್ಲಿ ಪರ ಬ್ಯಾಟಿಂಗ್ ಮಾಡಿದ್ದಾರೆ.
ಅಲ್ಲದೆ, ಡಿಆರ್ ಎಸ್ ವಿಚಾರದಲ್ಲಿ ಸ್ಟೀವ್ ಸ್ಮಿತ್ ನಡವಳಿಕೆ ತಪ್ಪು ಎಂದಿದ್ದಾರೆ. ಇತ್ತೀಚೆಗೆ ಆಸೀಸ್ ನ ಮಾಜಿ ಆಟಗಾರರಾದ ಬ್ರಾಡ್ ಹಾಗ್ ಮತ್ತು ಮೈಕಲ್ ಕ್ಲಾರ್ಕ್ ಕೂಡಾ ಕೊಹ್ಲಿ ಪರವಾಗಿ ಮಾತನಾಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ